

ಹೊಸಪೇಟೆ: ಜೀವನ ನೀಡುತ್ತಿರುವ ಅನೇಕ ಅನುಭವಗಳನ್ನು ಅರಿತ ರೋಟರಿ ಸಂಸ್ಥೆ ದೇಶದಲ್ಲಿ ನಿರಂತರವಾಗಿ ಸೇವೆ ಮಾಡುತ್ತಿದೆ ಎಂದು ಪದ್ಮಶ್ರೀ ಕೆ.ಎಸ್.ರಾಜಣ್ಣ ಹೇಳಿದರು.
ಇದನ್ನೂ ಓದಿ:ಬ್ಲಡ್ ಬ್ಯಾಂಕ್ ನಿರ್ಮಾಣಕ್ಕಾಗಿ ಸ್ಥಳ ಪರಿಶೀಲನೆ
ನಗರದ ರೋಟರಿ ಕ್ಲಬ್ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಮಾಮಹೇಶ್ವರ ರಾವು ಬ್ಲಡ್ ಬ್ಯಾಂಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲರಿಗೂ ಅವಶ್ಯಕ ಆರೋಗ್ಯ ಸೇವೆ ಒದಗಿಸಬೇಕು. ರಕ್ತದಾನ ಶ್ರೇಷ್ಠವಾದದು. ಒಂದು ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕುರಿತು ಜಾಗೃತಿ ಮೂಡಿಸಬೇಕು. ನನ್ನ ಸಾಧನೆಗೆ ಮತ್ತು ಸಮಾಜಸೇವೆಗೆ ಯಾವುದೇ ವೈಫಲ್ಯ ಕಾರಣವಲ್ಲ. ಹುಟ್ಟಿದ ಮಗು ಅಂಗವಿಕಲ ಎಂದು ತಿಳಿದ ಕ್ಷಣ ತೊಟ್ಟಿಗೆ ಬಿಸಾಕುವ ಜನರಿದ್ದಾರೆ. ಅಂಥ ಕೆಲಸಕ್ಕೆ ಯಾರೂ ಮುಂದಾಗಬೇಡಿ. ಸಮಾಜದಲ್ಲಿ ಅಂಗವಿಕಲರಿಗೆ ಅನುಕಂಪದ ಬದಲು ಅವಕಾಶ ನೀಡಲಿ ಎಂದರು.