ಮಗುವಿಗೆ ಉತ್ತಮ ಸಂಸ್ಕಾರ ನೀಡಿ

1 HRP 03
ಹರಪನಹಳ್ಳಿ ತಾಲೂಕಿನ ಅರಸೀಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್‌ಜಿ ಮನೋಹರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಹಾಲಮ್ಮ, ಎಸ್ಡಿಎಂಸಿ ಅಧ್ಯಕ್ಷ ರಮೇಶ, ಮುಖ್ಯ ಶಿಕ್ಷಕಿ ಅನುಸೂಯ, ಪ್ರಮುಖರಾದ ಪ್ರಶಾಂತ ಪಾಟೀಲ್, ಬಂದೋಳ್ ಸಿದ್ದೇಶ, ಎನ್ ಟಿ ಸೋಮಪ್ಪ, ಶಿಕ್ಷಕ ಬಸವರಾಜ, ಎಂ ಸುರೇಶ ಇತರರಿದ್ದರು.
Published on

ಹರಪನಹಳ್ಳಿ: ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್ ಜಿ ಮನೋಹರ್ ಹೇಳಿದರು.

ತಾಲೂಕಿನ ಅರಸೀಕೆರೆ ಗ್ರಾಮದ ಶಾಂತ ಪ್ರಕಾಶ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಇದು ಸರ್ಕಾರಿ ಶಾಲೆಗಳಲ್ಲಿ ಸಿಗುವ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

ಶಿಕ್ಷಕರು ಶಿಕ್ಷಣದೊಂದಿಗೆ ನೈಜ ಬದುಕಿನ ಚಿತ್ರಣವನ್ನು ಮಕ್ಕಳಲ್ಲಿ ಮೂಡಿಸುತ್ತಿದ್ದಾರೆ. ಶಿಕ್ಷಣದ ಜೊತೆಗೆ ಪೋಷಕರು ಮಗುವಿಗೆ ಉತ್ತಮ ಸಂಸ್ಕಾರ ನೀಡುವುದು ಅಗತ್ಯವಿದೆ. ಮಕ್ಕಳಿಗೆ ಕೇವಲ ಅಂಕವನ್ನು ಹೆಚ್ಚಿಸುವ ಕಡೆಗೆ ಮಾತ್ರ ಗಮನ ವಹಿಸುತ್ತಿರುವುದು ನೋವಿನ ಸಂಗತಿ, ವಿಜ್ಞಾನ ಬೆಳೆದಂತೆ ಸಂಸ್ಕಾರವು ಮರೆಮಾಚಿ ಹೋಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net