ವಿದ್ಯಾರ್ಥಿಗಳಿಗೆ ಮೌಲ್ಯಯುತ, ಜೀವನ ಶಿಕ್ಷಣ ಕೊಡಿ

BKL AGAMANA
Published on

ಭಟ್ಕಳ: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸುಸಜ್ಜಿತ ಕಟ್ಟಡಗಳು, ವಿದ್ಯಾರ್ಥಿಗಳು, ಶಿಕ್ಷಕರು, ಪುಸ್ತಕಗಳು ಎಲ್ಲವೂ ಇವೆ. ಆದರೆ ಮಕ್ಕಳಿಗೆ ಸಂಕಷ್ಟ ಬಂದಾಗ ಎದುರಿಸಿ ಬದುಕಲು ಕಲಿಸುವ ಜೀವನ ಶಿಕ್ಷಣ ಮತ್ತು ಮೌಲ್ಯಯುತ ಶಿಕ್ಷಣ ಮಾತ್ರ ಇಲ್ಲದಾಗಿದೆ ಎಂದು ಭಟ್ಕಳ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾ ಅಧಿಕಾರಿಗಳಾದ ವೆಂಕಟರಮಣ ವಿ. ಭಟ್ ಹೇಳಿದರು.

ಪಟ್ಟಣದ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಹೊಸ ವಿದ್ಯಾರ್ಥಿಗಳನ್ನು ಮಹಾವಿದ್ಯಾಲಯಕ್ಕೆ ಸ್ವಾಗತಿಸುವ ಆಗಮನ-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುರ್ಡೆಶ್ವರದ ಆರ್.ಎನ್ ಎಸ್. ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲೆ ಗೀತಾ ಕಿಣಿ ಮಾತನಾಡಿ, ಜ್ಞಾನದೊಂದಿಗೆ ತಾಳ್ಮೆ ಮತ್ತು ಸಮರ್ಪಣಾ ಭಾವದಿಂದ ಶಿಕ್ಷಕರಾಗುವವರು ಕೆಲಸ ಮಾಡಿದರೆ ಯಶಸ್ಸು ಪಡೆಯಲು ಸಾಧ್ಯ ವಾಗುತ್ತದೆ ಎಂದರು.

ಭಟ್ಕಳ ಎಜುಕೇಷನ್ ಟ್ರಸ್ಟ್​ನ ಟ್ರಸ್ಟಿ ಗುರುದತ್ತ ಶೇಟ್, ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಭಾಗ, ಪ್ರಧಾನ ಕಾರ್ಯದರ್ಶಿ ಪಲ್ಲವಿ, ಇತರರು ಉಪಸ್ಥಿತರಿದ್ದರು.

ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರಿಯಾಂಕಾ ದೇವಾಡಿಗ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net