ಧ್ವಜಸ್ತಂಭ ನಿರ್ಮಾಣಕ್ಕೆ ಸ್ಥಳ ನೀಡಿ

ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗ್ರಾಪಂ ಅಧ್ಯಕ್ಷೆ ಎಚ್.ಜೆ.ಶಾರದಾ, ಪಿಡಿಒ ಹಾಲಹರವಿ ಶೇಷಗಿರಿಗೆ ಮನವಿ ಸಲ್ಲಿಸಿದರು. ಗ್ರಾಪಂ ಉಪಾಧ್ಯಕ್ಷ ಎಚ್.ಗಾದಿಲಿಂಗಪ್ಪ, ಸದಸ್ಯೆ ಮುದ್ದೆ ಈರಮ್ಮ, ಕಾರ್ಯದರ್ಶಿ ದೇವರಾಜ್, ಕರವೇ ಪದಾಧಿಕಾರಿ ಎಚ್.ಪಂಪಾಪತಿ ಇತರರಿದ್ದರು.

Published on

ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಧ್ವಜಸ್ತಂಭ ನಿರ್ಮಾಣಕ್ಕೆ ಸ್ಥಳ ನೀಡುವಂತೆ ಒತ್ತಾಯಿಸಿ ಗುರುವಾರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗ್ರಾಪಂ ಅಧ್ಯಕ್ಷೆ ಎಚ್.ಜೆ.ಶಾರದಾ, ಪಿಡಿಒ ಹಾಲಹರವಿ ಶೇಷಗಿರಿಗೆ ಮನವಿ ಸಲ್ಲಿಸಿದರು.

ಕರವೇ (ನಾರಾಯಣಗೌಡ ಬಣ) ಪದಾಧಿಕಾರಿ ಎಚ್.ಪಂಪಾಪತಿ ಮಾತನಾಡಿ, ಗ್ರಾಮದ ಬಸ್ ನಿಲ್ದಾಣ ಹತ್ತಿರದ ಧ್ವಜಸ್ತಂಭದಲ್ಲಿ ಧ್ವಜಾರೋಹಣ ನಡೆಸಲು ಅನುಕೂಲವಿತ್ತು. ಆದರೆ, ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಧ್ವಜಸ್ತಂಭ ತೆರವುಗೊಳಿಸಲಾಗಿದೆ. ಆದ್ದರಿಂದ ರಾಷ್ಟ್ರೀಯ ಹಬ್ಬದ ವೇಳೆ ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ಧ್ವಜಸ್ತಂಭ ನಿರ್ಮಿಸಬೇಕು. ರೆಡ್ಡಿ ಓಣಿಯ ರಸ್ತೆ ಬಲಭಾಗಕ್ಕೆ ಸ್ಥಳವಿದ್ದು, ಧ್ವಜಸ್ತಂಭ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿದರು.

ಗ್ರಾಪಂ ಉಪಾಧ್ಯಕ್ಷ ಎಚ್.ಗಾದಿಲಿಂಗಪ್ಪ, ಸದಸ್ಯೆ ಮುದ್ದೆ ಈರಮ್ಮ, ಕಾರ್ಯದರ್ಶಿ ದೇವರಾಜ್, ಸಂಘಟನೆಗಳ ಪದಾಧಿಕಾರಿಗಳಾದ ಟಿ.ರಾಮಪ್ಪ, ಎಚ್.ಮಲ್ಲೇಶ್, ಎಸ್.ರಾಮಪ್ಪ, ಬಡಿಗೇರ ವೀರೇಶ, ಹಂಚಿನಾಳ್ ಪೀರಾಸಾಬ್, ಪ್ರಮುಖರಾದ ನಾಗರಾಜ, ಮಾರೇಶ, ಬಾಲೆಸಾಬ್, ಜಡಿಮೂರ್ತಿ, ಸಂತೋಷ, ಕರವಸೂಲಿಗಾರ ಗಾದಿಲಿಂಗಪ್ಪ, ತಾಂತ್ರಿಕ ಸಹಾಯಕ ರಾಜಶೇಖರರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net