

ರಾಯಚೂರು: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠಗಳನ್ನು ಒಂಭತ್ತು ಬಾರಿ ಚಾಕುವಿನಿಂದ ಇರಿದು ಪೈಶಾಚಿಕ ಕೃತ್ಯ ಎಸಗಿದ ಫಯಾಜ್‌ಗೆ ಮರಣ ದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಜಿಲ್ಲಾ ವೀರಶೈವ ಲಿಂಗಾಯತ ಸಮಾಜ ಹಾಗೂ ಮಹಾಸಭಾದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಾಲೇಜು ಆವರಣದಲ್ಲಿ ದುಷ್ಕರ್ಮಿ ಕೊನೆ ಮಾಡಿದ ಭೀಕರ ದೃಶ್ಯವನ್ನು ನೋಡಿದ ವಿದ್ಯಾರ್ಥಿನಿಯರು ವ್ಯಾಸಂಗಕ್ಕಾಗಿ ಕಾಲೇಜಿಗೆ ಆಗಮಿಸಲು ಭಯದ ವಾತಾವರಣ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ.
ಕೂಡಲೇ ಫಯಾಜ್ ಮತ್ತು ಸಹಚರರಿಗೆ ಮರಣ ದಂಡನೆಯಂತಹ ಕಠಿಣ ಶಿಕ್ಷೆ ವಿಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ದುಷ್ಕೃತ್ಯಕ್ಕೆ ಯಾರೂ ಕೈಹಾಕುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಮಾಜದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ಮಹಾಸಭಾ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ಪದಾಕಾರಿಗಳಾದ ನಾಗನಗೌಡ ಹರವಿ, ವಿಶ್ವನಾಥ ಪಾಟೀಲ್ ಕ್ಯಾದಿಗ್ಗೇರಿ, ವಿಜಯಕುಮಾರ ಸಜ್ಜನ್, ಮಲ್ಲಿಕಾರ್ಜುನ ದೋತರಬಂಡಿ, ಶರಣಬಸವ ಹಿರೇಮಠ, ಕಲ್ಲಯ್ಯ ಸ್ವಾಮಿ, ಪವನ ಪಾಟೀಲ್, ಎಸ್.ಬಿ.ಪಾಟೀಲ್, ಶಿವಶಂಕರ ಸ್ವಾಮಿ, ದಾನಮ್ಮ ಸುಭಾಶ್ಚಂದ್ರ, ವಿರುಪನಗೌಡ ಹರವಿ ಪಾಲ್ಗೊಂಡಿದ್ದರು.