ಸಂಯುಕ್ತ ಪಾಟೀಲರನ್ನು ಅಮೂಲ್ಯ ಮತ ನೀಡಿ

Give Samyukta Patil precious vote
ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ ಪರ ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ್ ನೀರಲಕೇರಿ ಗ್ರಾಮದಲ್ಲಿ ಮತಯಾಚನೆ ನಡೆಸಿದರು. ಮಹೇಶ ಹೊಸಗೌಡರ, ರಾಜಮಹ್ಮದ್ ಬಾಗವಾನ, ಎಂ.ಬಿ. ಹಂಗರಗಿ, ಪಿ.ಆರ್. ಗೌಡರ, ಆರ್.ಎ್. ಬಾಗವಾನ, ಎಂ.ಡಿ. ಯಲಿಗಾರ, ಶಶಿಕಾಂತ ಉದಗಟ್ಟಿ ಇತರರಿದ್ದರು.
Published on

ಗುಳೇದಗುಡ್ಡ: ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರನ್ನು ಅತ್ಯಧಿಕ ಮತಗಳಿಂದ ನೀವು ಗೆಲ್ಲಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೊಡ್ಡ ಶಕ್ತಿ ದೊರೆಯುತ್ತದೆ. ನೂರಕ್ಕೆ ನೂರು ಮತದಾನ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ್ ಹೇಳಿದರು.

ಸಮೀಪದ ನೀರಲಕೇರಿ ಮತ್ತಿತರ ಗ್ರಾಮದಲ್ಲಿ ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಪರ ಶುಕ್ರವಾರ ಮತಯಾಚಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುತ್ತಿದ್ದು, ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕುಟುಂಬದ ಮಹಿಳೆಗೆ ವಾರ್ಷಿಕ ಒಂದು ಲಕ್ಷ ರೂ. ನೀಡುವ ಗ್ಯಾರಂಟಿ ಜಾರಿಗೆ ತರಲಾಗುವುದು. ಅಲ್ಲದೆ, ರೈತರ ಸಾಲ ಮನ್ನಾ ಮಾಡಲಾಗುವುದೆಂದು ಪ್ರಣಾಳಿಕೆಯಲ್ಲಿ ನಮ್ಮ ಪಕ್ಷ ಘೋಷಣೆ ಮಾಡಿದ್ದು, ದೇಶ ಸರ್ವರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು ಎಂದು ಹೇಳಿದರು.

ಮಹೇಶ ಹೊಸಗೌಡರ, ರಾಜಮಹ್ಮದ್ ಬಾಗವಾನ, ಎಂ.ಬಿ. ಹಂಗರಗಿ, ಪಿ.ಆರ್. ಗೌಡರ, ಆರ್.ಎ್. ಬಾಗವಾನ, ಎಂ.ಡಿ. ಯಲಿಗಾರ, ಶಶಿಕಾಂತ ಉದಗಟ್ಟಿ, ರೇವಣಸಿದ್ದಪ್ಪ ನೋಟಗಾರ, ನಾಗಪ್ಪ ಕಡಪಟ್ಟಿ, ಹನುಮಂತ ದೇವರಮನಿ, ರಂಗಪ್ಪ ಅಮರನ್ನವರ, ಶಿವಾನಂದ ದ್ಯಾಮನ್ನವರ, ಯಲ್ಲಪ್ಪ ಸಣ್ಣಪ್ಪನವರ, ಮಧು ಯಡ್ರಾಮಿ, ಹನುಮಂತ ಸಣ್ಣಪ್ಪನವರ, ಹನುಮಂತ ನೀರಲಕೇರಿ, ಕರಿಯಪ್ಪ ಹೂಗಾರ, ಮಲ್ಲಪ್ಪ ಹಳ್ಳಿ, ಬಾಲಪ್ಪ ಪೂಜಾರಿ, ಬಿ.ಡಿ. ಪೂಜಾರಿ. ಪ್ರವೀಣ ಜೋಗಿನ, ರಾಮಪ್ಪ ಸೋಮನಕಟ್ಟಿ, ಶರಣು ಹಾದಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net