ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ೧ ಸಾವಿರ ಕೋಟಿ ಅನುದಾನ ಕೊಡಿ: ಸೈದಪ್ಪ

IMG_20230906_114617
Published on

ಹೊಸಪೇಟೆ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘದಿAದ ಸೆ.೨೩ ರಂದು ರಾಯಚೂರಿನ ಶ್ರೀ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಡಿ.ದೇವರಾಜ ಅರಸು ಅವರ ಜಯಂತೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘ ಅಧ್ಯಕ್ಷ ಸೈದಪ್ಪ ಕೆ.ಗುತ್ತೇದಾರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಜಂಟಿಯಾಗಿ ಉದ್ಘಾಟಿಸುವರು. ಈ ಭಾಗದ ಸಚಿವರು ಮತ್ತು ಶಾಸಕರು ಮುಖ್ಯಅತಿಥಿಯಾಗಿ ಪಾಲ್ಗೊಳ್ಳುವ ರು. ಇದೇ ವೇಳೆ ಹಿಂದುಳಿದ ಸಮಾಜದವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೧೦ ಜನರಿಗೆ ಹಿಂದುಳಿದ ವರ್ಗಗಳ ರತ್ನ ಡಿ.ದೇವರಾಜ ಅರಸು ರಾಜ್ಯ ಪ್ರಶಸ್ತಿ ನೀಡಿ, ಗೌರವಿಸಲಾಗುತ್ತದೆ ಎಂದು ವಿವರಿಸಿದರು.

ಹಿಂದುಳಿದ ಸಮಾಜಗಳ ಅಭಿವೃದ್ಧಿಗಾಗಿ ಸ್ಥಾಪಿಸಿದ್ದ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲಿದ್ದ ವಿವಿಧ ಸಮಾಜಗಳನ್ನು ಬೇರ್ಪ ಡಿಸಲಾಗಿದೆ. ಇತ್ತೀಚೆಗೆ ಪ್ರಬಲ ಸಮುದಾಯಗಳ ಹೆಸರಲ್ಲಿ ಸ್ಥಾಪಿಸಿರುವ ಅಭಿವೃದ್ಧಿ ನಿಗಮಗಳಿಗೆ ಸರ್ಕಾರ ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತದೆ. ಆದರೆ, ೧೯೭ ಸಮುದಾಯಗಳನ್ನು ಹೊಂದಿರುವ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ಅಲ್ಪಸ್ವಲ್ಪ ಎಂಬAತೆ ಅನುದಾನ ನೀಡುತ್ತಿದೆ. ಇದರಿಂದ ಹಿಂದುಳಿದ ಜನರ ಅಭಿವೃದ್ಧಿಯ ಕನಸು ಸಾಕಾರವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ೧೯೭ ಸಮುದಾಯಗಳಿಗೂ ಪ್ರತ್ಯೇಕ ನಿಗಮ ಸ್ಥಾಪಿಸಿ, ಕನಿಷ್ಠ ೧ ಸಾವಿರ ಕೋಟಿ ರೂ. ನೀಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೧೬ರಲ್ಲಿ ಹಿಂದುಳಿದ ಜನರ ಅಭಿವೃದ್ಧಿಯ ಕನಸಿನೊಂದಿಗೆ ಜನ ಗಣತಿ ನಡೆಸಿತ್ತು. ಆದರೆ, ಈವರೆಗೂ ಬಹಿರಂಗವಾಗಿಲ್ಲ. ತಕ್ಷಣ ಅದನ್ನು ಸರ್ಕಾರ ಒಪ್ಪಿಕೊಂಡು, ಸಾರ್ವಜನಕ ಚರ್ಚೆಗಾಗಿ ಬಹಿರಂಗಪಡಿಸಬೇಕು. ಚುನಾವ ಣೆಗಳಲ್ಲಿ ಎಸ್.ಸಿ., ಎಸ್.ಟಿ. ಮಾದರಿಯಲ್ಲಿ ಒಬಿಸಿಗೂ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು.

ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ವೈ.ಯಮುನೇಶ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯದ ಎರಡನೇ ದೇವರಾಜು ಅರಸು ಎಂದು ಕರೆಯುತ್ತೇವೆ. ಆದರೆ, ಹಿಂದುಳಿದ ಜನರ ಬದುಕಿನಲ್ಲಿ ಪರಿವರ್ತನೆ ತರುವ ನೈಜ ಪ್ರಯತ್ನಗಳಾಗಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಚುನಾವಣೆಗಳಲ್ಲಿ ಒಬಿಸಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು. ಅದಕ್ಕಾಗಿ ರಚಿಸಿದ್ದ ನ್ಯಾಯಮೂರ್ತಿ ಭಕ್ತವತ್ಸಲ ಆಯೋಗದ ವರದಿ ಜಾರಿಗೊಳಿಸಬೇಕು ಎಂದ ಅವರು, ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಕಲ್ಪಿಸಲು ಕಾನೂನು ಚೌಕಟ್ಟಿನಲ್ಲಿ ಅವಕಾಶವಿಲ್ಲ. ಅವರಿಗೆ ಬೇರೆ ಪರಿದಿಯಲ್ಲಿ ಸೌಲಭ್ಯಗಳನ್ನು ಒದಗಿಸಿದರೆ, ನಮ್ಮ ತಕರಾರು ಇಲ್ಲವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಎನ್.ರೂಪೇಶ ಕುಮಾರ್, ಬ್ರಹ್ಮರ್ಷಿ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಈ.ಯರಿಸ್ವಾಮಿ, ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಯು.ಆಂಜನೇಯಲು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net