

ಇಳಕಲ್ಲ: ಸಮೀಪದ ಬಲಕುಂದಿಯ ತಾಂಡಾ ಶಾಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆರಂಭೋತ್ಸವ ನಿಮಿತ್ತ ಒಂದನೇ ತರಗತಿ ಮಕ್ಕಳಿಗೆ ಗುಲಾಬಿ ಹೂ ನೀಡಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಬಳಿಕ ಮಕ್ಕಳನ್ನು ಕನ್ನಡ ವರ್ಣಮಾಲೆಯ ‘ಅ’ ಹಾಗೂ ‘ರ’ ಅಕ್ಷರಗಳ ಆಕಾರದಲ್ಲಿ ನಿಲ್ಲಿಸಿ ಶೈಕ್ಷಣಿಕ ಘೋಷ ವಾಕ್ಯಗಳನ್ನು ಘೋಷಿಸಲಾಯಿತು. ನಂತರ ಎಲ್ಲ ಮಕ್ಕಳಿಗೂ ಸಿಹಿ ಹಂಚಲಾಯಿತು.
ಶಾಲೆಯ ಮುಖ್ಯಶಿಕ್ಷಕ ಪರಶುರಾಮ ಪಮ್ಮಾರ, ಹಿರಿಯ ಶಿಕ್ಷಕ ಜಿ.ಕೆ. ಮಠ, ಮುತ್ತಣ್ಣ ಬೀಳಗಿ, ಆರ್.ಎಸ್. ಕೊಡಗಲಿ, ಎ.ಡಿ. ಬಾಗವಾನ, ಎಂ. ಎನ್. ಅರಳಿಕಟ್ಟಿ, ಎಸ್. ಎಲ್. ಜೋಗಿನ, ಎಂ. ಪಿ. ಚೇಗೂರ, ಪಿ. ಎಸ್. ಹೊಸೂರ, ಎಸ್. ಎಂ. ಮಲಗಿಹಾಳ,ಪ್ರಸನ್ನ ಮೇಗಡಿ, ಸಾಯಿರಾ ಹೆರಕಲ್ಲ ಉಪಸ್ಥಿತರಿದ್ದರು.