

ಹುನಗುಂದ: ಮಕ್ಕಳಿಗೆ ತಂದೆ-ತಾಯಿಗಳು ಸಂಸ್ಕಾರ ನೀಡಬೇಕು ಎಂದು ಚಿತ್ತರಗಿ ಸಂಸ್ಥಾನಮಠ ಗುರು ಮಹಾಂತ ಸ್ವಾಮಿಗಳು ಹೇಳಿದರು.
ಪಟ್ಟಣದ ಮಾತಾ ಎಜುಕೇಷನಲ್ ಮತ್ತು ರೂರಲ್ ಡೆವಲಪಮೆಂಟ್ ಟ್ರಸ್ಟ್‌ನ ಎಸ್.ಎಸ್.ಕಡಪಟ್ಟಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ ಸಮಾರಂಭವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳು ದೇವಸ್ಥಾನ ಇದ್ದಂತೆ. ಶಿಕ್ಷಕ ಪರಮ ಪೂಜ್ಯರು ಇದ್ದಂತೆ ಎಂದು ಮಕ್ಕಳಿಗೆ ಪಾಲಕರು ತಿಳಿಸಿಕೊಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಹನಮಂತ ಆರ್.ನಿರಾಣಿ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣ, ಹೊಸ ಶಿಕ್ಷಣ ನೀತಿ, ಶಿಕ್ಷಣದ ಜತೆಗೆ ಸಂಸ್ಕಾರ, ಯೋಗಾಭ್ಯಾಸದ ತರಬೇತಿಯನ್ನು ಮಕ್ಕಳ ಮನಸ್ಸಿಗೆ ತಲುಪಿಸಿದಾಗ ಜ್ಞಾನ ಹೆಚ್ಚಿಸುತ್ತದೆ. ಈ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಬಾಲ್ಯದಲ್ಲಿ ಕಲಿತ ವಿದ್ಯೆ, ಶಾಲೆ, ಕಾಲೇಜಿನಲ್ಲಿ ಕಲಿತ ಶಿಕ್ಷಣ ಜೀವನವನ್ನು ರೂಪಿಸುತ್ತದೆ ಎಂದರು.
ಬನಹಟ್ಟಿ ಕನ್ನಡ ಸಾಹಿತ್ಯ ಪರಿಷತ್‌ನ ಬಿ.ಆರ್.ಪೊಲೀಸ್ ಪಾಟೀಲ್, ನಿವೃತ್ತ ಪ್ರಾಂಶುಪಾಲರು ಗುಳೇದಗುಡ್ಡದ ಎಸ್.ಬಿ. ಬರಗುಂಡಿ, ಉಪನ್ಯಾಸಕಿ ವಿಜಯಲಕ್ಷ್ಮಿ ಎಸ್. ವಡೆಯರ್, ಶಿರೂರ ಮಹಾಂತ ತೀರ್ಥದ ಡಾ. ಬಸವಲಿಂಗ ಸ್ವಾಮಿಗಳು ಮಾತನಾಡಿದರು.
ಧನ್ನೂರ ಸರ್ಕಾರಿ ಪ್ರಾಥಮಿಕ ಶಾಲೆಯ ಮಂಜುಶ್ರೀ ಎ. ಮಣಿ, ನಿವೃತ್ತ ಪ್ರಾಂಶುಪಾಲ ವಿಜಯ ಬಳಿಗಾರ, ನಿವೃತ್ತ ಶಿಕ್ಷಕರಾದ ಮಲ್ಲಿಕಾರ್ಜುನ ಬಿ. ಗಂಜಿಹಾಳ, ಅಬ್ದುಲ್ ರೆಹಮಾನ್ ಜಿ. ಗಡೇದ, ಸಂಗಮೇಶ ಬಂಡರಗಲ್ಲ, ಮೇಘಾ ಬಿ. ಅನಗವಾಡಿ, ಬಸವರಾಜ ಎಸ್. ಕಡಪಟ್ಟಿ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಎಸ್.ಕಡಪಟ್ಟಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಲತಾ.ಬಿ.ಕಡಪಟ್ಟಿ, ಸಾಯಿ ಕೃಷ್ಣ ಇದ್ದರು.