

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಸ್ಕೃತಿ, ಪರಂಪರೆ ನಿಂತ ನೀರಲ್ಲ. ನಾಡಿನ ಸಾಂಸ್ಕೃತಿಕ ಉತ್ಸವಗಳನ್ನು ನಿರಂತರವಾಗಿ ಆಚರಿಸಲು ಮುಂದಿನ ಪೀಳಿಗೆಗೆ ನಮ್ಮಿಂದಲೇ ಸಂಸ್ಕಾರ ನೀಡಬೇಕು. ಮಕ್ಕಳಲ್ಲಿ ಶಿಕ್ಷಣದೊಂದಿಗೆ ನೈತಿಕತೆ, ಪ್ರಾಮಾಣಿಕತೆ ಗುಣ ಬೆಳೆಸಬೇಕು ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ರತ್ನಾ ಪಾಟೀಲ ಹೇಳಿದರು.
ನಗರದ ಹಿರೇಮಲ್ಲಿಗವಾಡ ಗ್ರಾಮದ ಎಂ. ಎಂ. ಹಿರೇಮಠ ಲೇಔಟ್ನ ಗುರುಕೃಪ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕ್ಷಿಪ್ರ ಗಣೇಶ ದೇವಸ್ಥಾನದ ಅವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಗಣೇಶೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ. ಎಂ. ಹಿರೇಮಠ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಜನ ಸಂಘಟನೆ ಮಾಡಲು ಪ್ರಾರಂಭವಾದ ಗಣೇಶ ಉತ್ಸವ ಇಂದು ಸದೃಢ ಸಮಾಜ ನಿರ್ಮಾಣಕ್ಕಾಗಿ ಆಚರಿಸಲಾಗುತ್ತಿದೆ ಎಂದರು.
ಉಪಾಧ್ಯಕ್ಷ ಸಂಜಯ ಖಥಗಲ್ಲಿ ವರದಿ ಮಂಡಿಸಿದರು. ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸ್ಪರ್ಧಾ ವಿಜೇತ ಮಹಿಳೆಯರು ಮತ್ತು ಮಕ್ಕಳಿಗೆ ಬಹುಮಾನ ನೀಡಲಾಯಿತು.
ಪಲ್ಲವಿ ಖಾನಪೇಟ್ ಮತ್ತು ತಂಡದವರಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶಶಿಕಾಂತ ಹೊಂಬಳ ಸ್ವಾಗತಿಸಿದರು. ಮೈತ್ರಾದೇವಿ ವಸ್ತ್ರದ ನಿರೂಪಿಸಿದರು. ವಿನೋದ ಜಾಂಬೋಟಕರ್ ವಂದಿಸಿದರು.