ನಿವೃತ್ತರಿಗೂ ಪರಿಷ್ಕೃತ ವೇತನ ಸೌಲಭ್ಯ ನೀಡಿ

22KDR2 (2)
Published on

ಕಡೂರು: 7ನೇ ವೇತನ ಆಯೋಗದ ಅನುಷ್ಟಾನದಲ್ಲಿ ನಿವೃತ್ತರಾದ ಅಧಿಕಾರಿ ಹಾಗೂ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ಒದಗಿಸಿಸುವಂತೆ ಒತ್ತಾಯಿಸಿ ಕರ್ನಾಟಕ ನಿವೃತ್ತ ನೌಕರರ ತಾಲೂಕು ವೇದಿಕೆಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ನಿವೃತ್ತ ನೌಕರರ ವೇದಿಕೆ ತಾಲೂಕು ಸಂಚಾಲಕ ಎಚ್.ಕೆಂಪಸಿದ್ದಯ್ಯ ಮಾತನಾಡಿ, ವೇತನ ಶ್ರೇಣಿಗಳ ಪರಿಷ್ಕರಣೆಯಿಂದ ಉಂಟಾಗುವ ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು ಆ.1ರಿಂದ ನಗದಾಗಿ ಪಾವತಿ ಮಾಡಬೇಕಿದೆ. ಜು.1ರಿಂದ31ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ಜೀವನವನ್ನು ಲೆಕ್ಕಹಾಕುವ ಉದ್ದೇಶಗಳಿಗಾಗಿ ಪರಿಗಣಿಸಬೇಕು ಎಂದರು.
ಹಳೇ ವೇತನ ಶ್ರೇಣಿ ಮೇಲೆ ಪರಿಗಣಿಸುತ್ತಿರುವುದು ನಿವೃತ್ತಿ ಜೀವನ ಸಂಧ್ಯಾಕಾಲದಲ್ಲಿರುವ ನಿವೃತ್ತ ನೌಕರರಿಗೆ ಸಾಕಷ್ಟು ನೋವುಂಟಾಗಿದೆ. 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯಗಳನ್ನು ಪಡೆಯುವ ಅರ್ಹತೆ ಪಡೆಯಲಾಗಿದೆ ಎಂದರು.
ನಿವೃತ್ತ ನೌಕರರ ವೇದಿಕೆ ಪದಾಧಿಕಾರಿಗಳಾದ ಜಿ.ಬಿ.ಆನಂದಮೂರ್ತಿ, ಗುರುರಾಜ್ ಹಾಲ್ಮಠ್, ಮಲ್ಲಿಕಾರ್ಜುನ್, ಮಹೇಶ್, ರಾಜಶೇಖರ್, ನಾಗರಾಜಪ್ಪ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net