

ಹುಬ್ಬಳ್ಳಿ: ಶಿಶು ಅಭಿವೃದ್ಧಿ ಯೋಜನೆ ಹುಬ್ಬಳ್ಳಿ ಗ್ರಾಮೀಣ ವತಿಯಿಂದ ಇಲ್ಲಿಯ ಕೆಎಂಸಿಆರ್‌ಐನ ಪ್ರಸತಿ ವಿಭಾಗದಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ (ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ) ಕಾರ್ಯಕ್ರಮ ಶನಿವಾರ ಏರ್ಪಡಿಸಲಾಗಿತ್ತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆತ್ತಿಕಾ ಎಂ. ಸಿದ್ದಿ ಮಾತನಾಡಿ, ಹೆಣ್ಣು ಮಗುವಿನ ಬಗೆಗೆ ಅಪಾರ ಪ್ರೀತಿ ಮತ್ತು ಗೌರವ ಹೊಂಸಬೇಕು. ಬಾಲ್ಯ ವಿವಾಹ, ಲಿಂಗ ತಾರತಮ್ಯ, ಹೆಣ್ಣು ಭ್ರೂಣ ಹತ್ಯೆಯಂಥ ಪಾಪದ ಕೆಲಸಕ್ಕೆ ಕೈ ಹಾಕಬಾರದು ಎಂದು ತಿಳಿವಳಿಕೆ ನೀಡಿದರು.
ಇಂದು ಜನಿಸಿದ ಹೆಣ್ಣು ಮಗುವಿನ ತಾಯಿಗೆ ಸಿಹಿ ತಿನಿಸಿ, ಭೇಟಿ ಬಚಾವೋ ಭೇಟಿ ಪಡಾವೋ ಕರಪತ್ರ ನೀಡಿ, ಗುಲಾಬಿ ಹೂವಿನ ಸಸಿಯನ್ನು ವಿತರಿಸಲಾಯಿತು. ಭೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಕೆಎಂಸಿಆರ್‌ಐನ ಆರ್‌ಒಎಂ ಡಾ. ಸಿದ್ದೇಶ್ವರ ಕಟಕೋಳ, ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಹೇಮಲತಾ, ಡಾ. ಅಮಿತಾ ಕಾಮತ್ ಇತರರು ಉಪಸ್ಥಿತರಿದ್ದರು.