ಬಣಜಿಗರಿಗೆ ಮೀಸಲಾತಿ ಪ್ರಮಾಣಪತ್ರ ನೀಡಿ

15 HKR 02
Published on

ಹಿರೇಕೆರೂರ: ಬಣಜಿಗ ಸಮಾಜದ ವಿದ್ಯಾರ್ಥಿಗಳು, ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ 2ಎ, 3ಎ, ಒಬಿಸಿ ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸಿ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶಿರಸ್ತೇದಾರ್ ಎನ್.ಎಸ್. ಸೋನೆ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಲ್ಯಾಣಪ್ಪ (ಬಾಬಣ್ಣ) ಹಂಚಿನ ಮಾತನಾಡಿ, ಬಣಜಿಗ ಸಮಾಜದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ 2ಎ ಹಾಗೂ ಉದ್ಯೋಗ ಮತ್ತು ಇತರ ಕೆಲಸಗಳಿಗಾಗಿ 3ಎ, ಒಬಿಸಿ ಮೀಸಲಾತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ನಮ್ಮ ಸಮಾಜವನ್ನು ಸೇರ್ಪಡೆ ಮಾಡಿವೆ. ರಾಜ್ಯದ ಹಲವು ಜಿಲ್ಲೆ ಮತ್ತು ತಾಲೂಕುಗಳಲ್ಲಿ 2ಎ, 3ಎ, ಮೀಸಲಾತಿ ಪ್ರಮಾಣಪತ್ರ ನೀಡಲಾಗುತ್ತಿದೆ. ಇನ್ನು ಮುಂದೆ ಈ ತಾಲೂಕಿನಲ್ಲಿ ಬಣಜಿಗ ಸಮಾಜದ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಮೀಸಲಾತಿ ಪ್ರಮಾಣಪತ್ರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಮದ್ವೀರಶೈವ ಸಮಾಜದ ಅಧ್ಯಕ್ಷ ವೀರೂಪಾಕ್ಷಪ್ಪ ಹಂಪಾಳಿ, ಸಂಘದ ಪ್ರಧಾನ ಕಾರ್ಯದರ್ಶಿ ಉಮೇಶ ಹಳಕಟ್ಟಿ, ಗೌರವಾಧ್ಯಕ್ಷ ವೀರಪ್ಪ ಎಣ್ಣಿ, ಉಪಾಧ್ಯಕ್ಷ ಚಂದ್ರಪ್ಪ ಹಲವಾಲದ, ಸಹ ಕಾರ್ಯದರ್ಶಿ ಈರಣ್ಣ ಹಾದ್ರಿಹಳ್ಳಿ, ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ ಹಂಚಿ, ಗಿರೀಶ ಅಂಗರಗಟ್ಟಿ, ಮೃತ್ಯುಂಜಯ ಕೆಂಬಿ, ರೇಣುಕೇಶ ಮೊಗಲಿಶೆಟ್ಟರ, ನಾಗರಾಜ ನಲವಾಲದ, ಮುಖಂಡರಾದ ಸಿದ್ದಲಿಂಗೇಶ ಶೆಟ್ಟರ, ಇಂದುಧರ ಶೆಟ್ಟರ, ರುದ್ರೇಶ ಬೇತೂರ, ವಿಜಯಕುಮಾರ ಹಳಕಟ್ಟಿ, ಶುಭಾಕರ ಹಂಪಾಳಿ, ಪ್ರಕಾಶ ಹಂಪಾಳಿ, ವೀರೇಂದ್ರ ಶೆಟ್ಟರ, ರಾಜು ಆರಿಕಟ್ಟಿ, ಪ್ರವೀಣ ಹಂಪಾಳಿ, ಮಹಾಂತೇಶ ಕೋರಿ, ಪ್ರಕಾಶ ಮಾಲ್ವಿ, ಶಂಭುಲಿಂಗ ಮೊಗಲಿ, ಚಂದ್ರಣ್ಣ ಕಲ್ಯಾಣಿ, ಜಗದೀಶ ಕಲ್ಯಾಣಿ, ವಿನಾಯಕ ವಾಲಿ, ಮಂಜುನಾಥ ಕಂಪ್ಲಿ, ಚಂದ್ರಣ್ಣ ಹಾದ್ರಿಹಳ್ಳಿ, ಜಗದೀಶ ಶೆಟ್ಟರ, ರಾಕೇಶ ಶೆಟ್ಟರ, ನವೀನ್ ಕೋರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net