ಮಕ್ಕಳ ಹಕ್ಕುಗಳಿಗೆ ಮನ್ನಣೆ ನೀಡಿ

khhalli Childrens Day
ಕಾನಹೊಸಹಳ್ಳಿ ಸಮೀಪದ ಹುಡೇಂ ಗ್ರಾಮದ ಗ್ರಂಥಾಲಯ ಹಾಗೂ ಅರಿವು ಕೇಂದ್ರದಲ್ಲಿ ಮಕ್ಕಳ ದಿನ ಆಚರಿಸಲಾಯಿತು. ಪಿಡಿಒ ಲಕ್ಷ್ಮೀಬಾಯಿ, ಮುಖ್ಯಶಿಕ್ಷಕ ಅಜ್ಜಯ್ಯ, ಸುಪ್ರೀತ್ ಕುಮಾರ್, ಸುಮಿತ್ರಾ ಇತರರಿದ್ದರು.
Published on

ಕಾನಹೊಸಹಳ್ಳಿ: ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುವುದರ ಜತೆಗೆ ಅವರ ಪ್ರಗತಿ, ಹಕ್ಕುಗಳಿಗೆ ಮನ್ನಣೆ ನೀಡಬೇಕು ಎಂದು ಪಿಡಿಒ ಲಕ್ಷ್ಮೀಬಾಯಿ ಹೇಳಿದರು.

ಹುಡೇಂ ಗ್ರಾಪಂನ ಗ್ರಂಥಾಲಯ ಹಾಗೂ ಅರಿವು ಕೇಂದ್ರದಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಪ್ರತಿ ಮಗುವಿಗೂ ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕು ಇದ್ದು, ಪಾಲಕರು ಪಾಲಿಸಬೇಕು. ಕೆಲಸಕ್ಕೆ ಕಳಿಸುವುದು, ಬಾಲ್ಯ ವಿವಾಹ ಮಾಡುವುದು ಅಪರಾಧವಾಗಿದ್ದು, ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸಬೇಕು ಎಂದು ತಿಳಿಸಿದರು.

ಕಂಪಳರಂಗಸ್ವಾಮಿ ಪ್ರೌಢಶಾಲೆ ಮುಖ್ಯಶಿಕ್ಷಕ ಬಿ.ಜಿ.ಅಜ್ಜಯ್ಯ, ಗ್ರಾಪಂ ಅರಿವು ಕೇಂದ್ರದ ಗ್ರಂಥಾಲಯದ ಮೇಲ್ವಿಚಾರಕ ತುಡುಮ ಗುರುರಾಜ್ ಮಾತನಾಡಿದರು. ಗ್ರಾಪಂ ಸದಸ್ಯ ಅಜ್ಜಣ್ಣ, ಶಿಕ್ಷಕರಾದ ಸುಪ್ರೀತ್ ಕುಮಾರ್, ಪ್ರಹ್ಲಾದ್, ಪುಷ್ಪಾ, ಚಂದ್ರಣ್ಣ, ಸುಮಿತ್ರಾ, ಕುಬೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net