ರಾಗಿಮುದ್ದೆ, ಜೋಳದ ರೊಟ್ಟಿ ಕೊಡಿ

31 smg 1
ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟಿನ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಕಪ್ಪುಬಟ್ಟೆ ಪ್ರದರ್ಶಿಸಿದರು. ಕಲ್ಲೂರು ಮೇಘರಾಜ್, ಎಚ್.ಎಂ.ಸಂಗಯ್ಯ, ಶಂಕ್ರನಾಯ್ಕ, ಕೆ.ಆರ್.ಶಿವಣ್ಣ, ಸುರೇಶ್ ಕೋಟೆಕಾರ್, ಎಸ್.ಜಿ.ಸುರೇಶ್, ನಾಗೇಶ್ ರಾವ್, ಗೋಪಾಲಕೃಷ್ಣ, ನರಸಿಂಹಮೂರ್ತಿ, ಟಿ.ಬಿ.ಸೋಮಶೇಖರಯ್ಯ, ಮಂಜ ನಾಯ್ಕ, ಶಾಂತಾ ಸುರೇಂದ್ರ, ಪುಪ್ಪಾವತಿ, ಜಿ.ಮಂಜುಳಾ, ಸರಳಾ ವಾಸು ಇದ್ದರು.
Published on

ಶಿವಮೊಗ್ಗ: ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಪೌಷ್ಟಿಕತೆ ಹೆಚ್ಚಿಸಲು ರಾಗಿಮುದ್ದೆ ಹಾಗೂ ಜೋಳದ ರೊಟ್ಟಿಗೆ ಅಗತ್ಯ ಬೀಳುವ ಆಹಾರ ಧಾನ್ಯ ಖರೀದಿಗೆ ಒಪ್ಪಿಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಸೋಮವಾರ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟಿನ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಕಪ್ಪುಬಟ್ಟೆ ಪ್ರದರ್ಶಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಸುಮಾರು 55.08 ಲಕ್ಷ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ರಾಗಿ, ಜೋಳದಲ್ಲಿ ತಯಾರಿಸಿದ ಪೌಷ್ಟಿಕ ಆಹಾರದ ಅವಶ್ಯಕತೆ ಇದೆ. ಇದನ್ನು ಮನಗಂಡು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿತ್ತು. ಆದರೆ ಕೇಂದ್ರ ಸರ್ಕಾರ ಅದನ್ನು ತಿರಸ್ಕರಿಸಿದೆ. ಇದು ಕೇಂದ್ರದ ಮಕ್ಕಳ ವಿರೋಧಿ ನೀತಿಯಾಗಿದೆ ಎಂದು ಪ್ರತಿಭಟನಾಕಾರರು ಖಂಡಿಸಿದರು.
ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪದಾಧಿಕಾರಿಗಳಾದ ಎಚ್.ಎಂ.ಸಂಗಯ್ಯ, ಕೆ.ಆರ್.ಶಿವಣ್ಣ, ಸುರೇಶ್ ಕೋಟೆಕಾರ್, ಎಸ್.ಜಿ.ಸುರೇಶ್, ನಾಗೇಶ್ ರಾವ್, ಗೋಪಾಲಕೃಷ್ಣ, ನರಸಿಂಹಮೂರ್ತಿ, ಟಿ.ಬಿ.ಸೋಮಶೇಖರಯ್ಯ, ಮಂಜ ನಾಯ್ಕ, ಶಾಂತಾ ಸುರೇಂದ್ರ, ಪುಪ್ಪಾವತಿ, ಶಂಕ್ರನಾಯ್ಕ, ಜಿ.ಮಂಜುಳಾ, ಸರಳಾ ವಾಸು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net