

ರಾಯಬಾಗ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ನೀಡುವುದು ಪಾಲಕರು ಮತ್ತು ಗುರುಗಳ ಕರ್ತವ್ಯ ಎಂದು ಕೊಲ್ಲಾಪುರ ಜೈನಮಠದ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಮಹಾವೀರ ಭವನದಲ್ಲಿ ಅರಿಹಂತ ಚಾರಿಟಬಲ್ ಫೌಂಡೇಷನ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ೧೧ನೇ ವರ್ಷದ ತಾಲೂಕು ಜೈನ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾವೇಶದಲ್ಲಿ ಮಾತನಾಡಿ, ಮನುಷ್ಯನಿಗೆ ಶಿಕ್ಷಣದ ಜ್ಞಾನ ನೀಡುವುದೇ ಶ್ರೇಷ್ಠ ದಾನವಾಗಿದೆ ಎಂದರು.
ಜೈನ ಸಮುದಾಯದ ಮುಖಂಡ ವಿನೋದ ದೊಡ್ಡಣ್ಣವರ ಮಾತನಾಡಿ, ಪ್ರಧಾನಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳಲ್ಲಿರುವ ಕಲೆ, ಅಭಿರುಚಿಗೆ ಪಾಲಕರು ಪ್ರೋತ್ಸಾಹ ನೀಡಬೇಕು ಎಂದರು.
ಜಮಖಂಡಿ ಮಾಸ್ಟರ್ ಅಕಾಡೆಮಿ ಉಪನ್ಯಾಸಕ ಶೀತಲ ಅಸ್ಕಿ ಮತ್ತು ಪ್ರಾಚಾರ್ಯ ಸಂಜೀವ ಹುಲ್ಲೋಳಿ ಮಾತನಾಡಿದರು.
ಕಾರ್ಯದರ್ಶಿ ಮಲ್ಲಪ್ಪ ಖಾನಟ್ಟಿ, ಹಿರಿಯ ಧುರೀಣ ಈರಗೌಡ ಪಾಟೀಲ, ಹುಕ್ಕೇರಿ ಮಹಾವೀರ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಮಹಾವೀರ ನಿಲಜಗಿ, ಅರಿಹಂತ ಚಾರಿಟಬಲ್ ಉಪಾಧ್ಯಕ್ಷ ಸಂಜಯ ಬಡೋರೆ, ಕಾರ್ಯದರ್ಶಿ ಮಲ್ಲಪ್ಪ ಖಾನಟ್ಟಿ, ನಿರ್ದೇಶಕರಾದ ದಶರಥ ಶೆಟ್ಟಿ, ಶೀತಲ ಬೇಡಕಿಹಾಳೆ, ಸಂಜಯ ಹಂಜೆ, ಪಾರೀಶ ಉಗಾರೆ, ಭರತೇಶ ಪಾಟೀಲ, ನೇಮಿನಾಥ ಅಸ್ಕಿ, ವರ್ಧಮಾನ ಬನವಣೆ ಇತರರಿದ್ದರು.