ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಿ

5ATHANIGRAMIN1
Published on

ಅಥಣಿ ಗ್ರಾಮೀಣ: ಪಾಲಕರು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಜತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಬೆಂಗಳೂರು ಆನ್‌ಲೈನ್ ಇನ್ಸ್ಟ್ರೂಮೆಂಟ್ ಪದಾಧಿಕಾರಿ ಮಹೇಶ ಬೆಲ್ಲದ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಶ್ರೀಮತಿ ಶಾಂತಾಬಾಯಿ ದೇಶಪಾಂಡೆ ಸಿಬಿಎಸ್‌ಸಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟವಾಗಿದೆ ಎಂದು ತಿಳಿಸಿದರು.

ಶ್ರೀ ರೇಣುಕಾ ಶುಗರ್ಸ್‌ ಡೆವಲಪ್ಮಂಟ್ ೌಂಡೇಷನ್ ಎಜಿಎಂ ಬಾಬುರಾವ ಮಲಗನ್ನವರ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಪಾಲಕರ ಸಹಕಾರ ಅಗತ್ಯವಾಗಿದೆ. ಪಾಲಕರು ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು ಎಂದರು.

ಕೊಕಟನೂರ ರೇಣುಕಾ ಶುಗರ್ಸ್‌ನ ಜಿಎಂ ಸಂಜೀವ ತೇರದಾಳ ಮಾತನಾಡಿದರು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು. ಪ್ರಾಚಾರ್ಯ ಅಶೋಕ ತುಪ್ಪದ, ರಾಜಕುಮಾರ ಅಡಹಳ್ಳಿ, ಸಂದೀಪ ಪಾಟೀಲ, ಸಂಜೀವ ಗೌರಗೊಂಡ, ಪಾರೀಸ್ ಅಕ್ಕೋಳ, ಶಿವಯ್ಯ ಹಿರೇಮಠ, ಮುರುಗೇಶ ಹಲ್ಯಾಳ, ನಯನಾ ನಾಯಕ, ದತ್ತಾ ಜಾಧವ, ಶಿವಲೀಲಾ ವಸದ, ಅಕ್ಷತಾ ಚೌಕಿ, ಸೋನಾಲಿ ಚವ್ಹಾಣ, ಪದ್ಮಾಕರ ಕುಲಕರ್ಣಿ ಇತರರಿದ್ದರು. ಸಮೀರ್ ಮುಲ್ಲಾ ಸ್ವಾಗತಿಸಿದರು. ಕೃಷ್ಣಾ ಗುರವ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net