ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ

ಅಳವಂಡಿಯ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮೇಳ ಕಾರ್ಯಕ್ರಮವನ್ನು ಅಗಸ್ತ್ಯ ಫೌಂಡೇಷನ್ ತಾಲೂಕು ಸಂಚಾಲಕ ಶಿವಪ್ಪ ಅಕ್ಕಸಾಲಿಗ ಉದ್ಘಾಟಿಸಿದರು. ಸಿಆರ್‌ಪಿ ವಿಜಯಕುಮಾರ ಟಿಕಾರೆ, ಮುಖ್ಯಶಿಕ್ಷಕರಾದ ಜಯಾ ತಳಗೇರಿ, ಯಲ್ಲಪ್ಪ ಬಂಡಿ, ಮಾರುತಿ ಕಾತರಕಿ ಇತರರಿದ್ದರು.

Published on

ಅಳವಂಡಿ: ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಅಗಸ್ತ್ಯ ಫೌಂಡೇಷನ್ ತಾಲೂಕು ಸಂಚಾಲಕ ಶಿವಪ್ಪ ಅಕ್ಕಸಾಲಿಗ ಹೇಳಿದರು.

ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಧಿಕಾರಿಗಳ ಕಾರ್ಯಾಲಯ, ಟಾಟಾ ಪವರ್, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಜ್ಞಾನ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಜ್ಞಾನ ಮೇಳ ಮಕ್ಕಳಲ್ಲಿ ವೈಜ್ಞಾನಿಕ ಹಾಗೂ ಕಲಿಕಾ ಮನೋಭಾವ ಬೆಳೆಸಲಿದೆ. ಪಾಠ ಮನನದ ಜತೆ ಸಾಮಾನ್ಯಜ್ಞಾನ ಹೆಚ್ಚಲಿದೆ. ಮಕ್ಕಳನ್ನು ವಿಜ್ಞಾನ, ಗಣಿತ ವಿಷಯಗಳತ್ತ ಆಕರ್ಷಿಸಿ ಸಂಶೋಧನೆ ಕೈಕೊಳ್ಳಲು ಹಾಗೂ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.

ಸಿಆರ್‌ಪಿ ವಿಜಯಕುಮಾರ ಟಿಕಾರೆ, ಮುಖ್ಯಶಿಕ್ಷಕರಾದ ಜಯಾ ತಳಗೇರಿ, ಯಲ್ಲಪ್ಪ ಬಂಡಿ, ಮಾರುತಿ ಕಾತರಕಿ, ಶಿಕ್ಷಕರಾದ ಸುನಿತಾ ಗಾಬರಿ, ಪಕೀರಮ್ಮ ಮಠ, ಇಸ್ರತ್‌ಬಾನು, ಚನ್ನಮ್ಮ, ಸುಜಾತಾ ಸುಣಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net