ಅಧ್ಯಯನಕ್ಕೆ ಪ್ರಥಮ ಆದ್ಯತೆ ನೀಡಿ

19 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಕ್ಕಳು ಸರಿ ದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರ ಮೇಲಿದೆ. ಪ್ರೌಢಶಾಲೆಯಲ್ಲಿ ಓದುವ ಮಕ್ಕಳಿಂದ ಹದಿಹರೆಯದ ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕು. ಮೊಬೈಲ್​, ಟಿವಿಗಳಿಂದ ಮಕ್ಕಳು ದೂರವಿದ್ದು, ಆಟ, ಅಧ್ಯಯನಕ್ಕೆ ಪ್ರಥಮ ಆದ್ಯತೆ ನೀಡುವಂತೆ ನೋಡಿಕೊಳ್ಳಬೇಕು ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.

ನಗರದ ಕಮಲಾಪುರದ ಜ್ಞಾನಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆಯ ವಿವಿಧ ಶಾಲೆ, ಕಾಲೇಜುಗಳ ವತಿಯಿಂದ ಏರ್ಪಡಿಸಿದ್ದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಶಿಕ್ಷಣ ಮೌಲ್ಯ ಹೆಚ್ಚಿಸಬೇಕು. ಮಕ್ಕಳ, ಪಾಲಕರ ಹಾಗೂ ಶಿಕ್ಷಕರ ಮನಸ್ಥಿತಿ ಒಂದಾಗಬೇಕು. ಇದು ಮಕ್ಕಳಲ್ಲಿ ಪರಿಪೂರ್ಣ ಮತ್ತು ಸಮಗ್ರವಾದ ವ್ಯಕ್ತಿತ್ವ ಬೆಳೆಯಲು ಸಹಕಾರಿ. ಮಕ್ಕಳಿಗೆ ಹದಿ ಹರೆಯದ ವರ್ಷಗಳಲ್ಲಿ ಮಾರ್ಗದರ್ಶನ ಅಗತ್ಯ. ಮಕ್ಕಳ ಸಮಗ್ರ ವ್ಯಕ್ತಿತ್ವ ಬೆಳೆಸುವಲ್ಲಿ ಶಿಕ್ಷಣ ಸಂಸ್ಥೆ, ಕುಟುಂಬದವರು ಗಮನವಹಿಸಲಿ. ಮಕ್ಕಳ ಕನಸುಗಳನ್ನು ನನಸು ಮಾಡಿ. ಆದರೆ ನಿಮ್ಮ ಕನಸುಗಳನ್ನು ಅವರ ಮೇಲೆ ಹೆರಬೇಡಿ ಎಂದರು.

ಡಿಡಿಪಿಐ ಎಸ್​.ಎಸ್​.ಕೆಳದಿಮಠ, ಶಹರ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಜಿಲ್ಲಾ ಸಹಾಯಕ ವಾರ್ತಾಧಿಕಾರಿ ಡಾ.ಎಸ್​.ಎಂ.ಹಿರೇಮಠ, ಶಿಕ್ಷಣ ಇಲಾಖೆ ಅಧಿಕಾರಿ ಮಂಜುನಾಥ ಅಡವೇರ, ಮಂಗಳೂರಿನ ಯುನಿವರ್ಸಲ್​ ನಾಲೆಡ್ಜ್​ ಟ್ರಸ್ಟ್​ ಸದಸ್ಯೆ ಅಶ್ವಿನಿ ಅಳಟಗಿ ನಾಯಕ್​ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಪುತ್ರಯ್ಯ ರುದ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಂಗಯ್ಯ ಠಾಣಯ್ಯ ಹಿರೇಮಠ, ಶಿಕ್ಷಕರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net