

ಲಿಂಗಸುಗೂರು: ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಜಿಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ ಬುಧವಾರ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು.
ತಾಲೂಕಿನ ಜಲಜೀವನ್ ಮಿಷನ್ ಯೋಜನೆಯಡಿ ಕೈಗೆತ್ತಿಕೊಂಡ ಡಿಬಿಟಿಎಂವಿಎಸ್ ಬಹುಗ್ರಾಮ ಕುಡಿವ ನೀರಿನ ಕಾಮಗಾರಿಗಳ ಭೌತಿಕ ಪ್ರಗತಿ ಮತ್ತು ಜಲಾಶಯದ ಹಿನ್ನೀರಿನ ಭಾಗದಲ್ಲಿ ಇನ್‌ಟೆಕ್ ಕಂ ಜಾಕ್‌ವೆಲ್ ಹೆಡ್‌ವರ್ಕ್ ಸಂಪರ್ಕ ಸೇತುವೆ ವೀಕ್ಷಿಸಿ ಗುಣಮಟ್ಟದ ಕಾಮಗಾರಿ ಕೈಗೊಂಡು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಚಿತ್ತಾಪುರ ಗ್ರಾಮದ ಹತ್ತಿರ 160 ಎಂಎಲ್‌ಡಿ ನೀರು ಸಂಸ್ಕರಣಾ ಘಟಕದ ಏರೇಟರ್, ಕ್ಲಾರಿಫ್ರೋಕ್ಯುಲೇಟರ್, ಶೋಧನೆ, ಕ್ಲೋರಿನೇಷನ್ 16 ಶೋಧನೆ ಹಾಸಿಗೆ ಪೂರ್ಣಗೊಂಡ ಕಾಮಗಾರಿ ಮತ್ತು ನಿರ್ಮಾಣ ಹಂತದ ವಿವಿಧ ಘಟಕಗಳ ಕಾಮಗಾರಿಗಳನ್ನು ಪರಿಶೀಲಿಸಿದರು. ಬಳಿಕ ನಾಗರಹಾಳ ಮತ್ತು ನರಕಲದಿನ್ನಿ ಮಾರ್ಗದಲ್ಲಿ ಕೈಗೊಂಡ ಎಂಎಸ್ ಪೈಪ್‌ಲೈನ್ ಹಾಗೂ ಯೋಜನೆಯಡಿ ಕಾನಾಪುರ ಹಟ್ಟಿ ಗ್ರಾಮದಲ್ಲಿ ನಿರ್ಮಿಸಿದ ಪ್ರಿಕಾಸ್ಟ್ ಮೇಲ್ಮಟ್ಟದ ಜಲಾಗಾರದ ಕಾಮಗಾರಿ ಪರಿಶೀಲಿಸಿದರು.
ಮುದಗಲ್ ಪಟ್ಟಣ ಹತ್ತಿರದ ಗುತ್ತಿಗೆದಾರರ ಕ್ಯಾಂಪ್‌ಗೆ ಭೇಟಿ ನೀಡಿ ಯೋಜನೆಗೆ ಅವಶ್ಯವಿರುವ ಪ್ರಿಕಾಸ್ಟ್ ಟ್ಯಾಂಕ್ ಕಾಸ್ಟಿಂಗ್ ಕಾಮಗಾರಿ ವೀಕ್ಷಿಸಿ ಎಸ್‌ಎನ್‌ಸಿವಿಇಐಪಿಎಲ್, ಎಸ್ಪಿಎಂಎಲ್ ಜೆವಿ ಪ್ರಾಜೆಕ್ಟ್‌ನ ತಾಂತ್ರಿಕ ಅಧಿಕಾರಿಗಳಿಂದ ಭೌತಿಕ ಪ್ರಗತಿ ಮತ್ತು ಅನುಷ್ಠಾನದ ಕುರಿತು ಮಾಹಿತಿ ಪಡೆದರು. ತಾಂತ್ರಿಕ ಬೆಂಬಲ ಮತ್ತು ಗುಣಮಟ್ಟ ನಿಯಂತ್ರಣ ಏಜೆನ್ಸಿ ಪಿಎಂಸಿ, ಎಜಿಐಎಸ್ ಇಂಡಿಯಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಪ್ರೈ.ಲಿ.ನಿಂದ ಮಾಹಿತಿ ಪಡೆದರು. ನಂತರ ಪಿಎಂಸಿ, ಇಜಿಐಎಸ್ ಇಂಡಿಯಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಪ್ರೈ.ಲಿ. ಹೆಡ್ವರ್ಕ್‌ನಲ್ಲಿ ಜಾಕ್‌ವೆಲ್ ಕಂ. ಪಂಪ್‌ಹೌಸ್‌ನ 22 ಫೈಲಿಂಗ್ ಕಾಮಗಾರಿ ವೀಕ್ಷಿಸಿದರು.