

ವಿಜಯಪುರ: ಪಕ್ಷವನ್ನು ತಳಮಟ್ಟದಿಂದಲೇ ಗಟ್ಟಿಗೊಳಿಸಲು ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಬೇಕು. ಮುಂಬರುವ ದಿನಗಳಲ್ಲಿ ನಡೆಯಲಿರುವ ಜಿ.ಪಂ., ತಾ.ಪಂ. ಚುನಾವಣೆಗಳಲ್ಲಿ ಎಲ್ಲ ೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಈಗಿನಿಂದಲೇ ಪಕ್ಷ ಸಂಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಕರೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮುಂಬರುವ ಜಿ.ಪಂ., ತಾ.ಪಂ., ಚುನಾವಣೆ ಹಿನ್ನೆಲೆ ಸೋಮವಾರ ಹಮ್ಮಿಕೊಂಡಿದ್ದ ಪಕ್ಷದ ವಿವಿಧ ಸಮಿತಿಗಳ ಸಭೆಯಲ್ಲಿ ಅವರು ಮಾತನಾಡಿ, ಎಐಸಿಸಿ ಹಾಗೂ ಕೆಪಿಸಿಸಿಯ ನಿರ್ದೇಶನದಂತೆ ಪಕ್ಷವನ್ನು ತಳಮಟ್ಟದಿಂದ ಸಂಟಿಸುವುದು ಅತ್ಯವಶ್ಯವಾಗಿದೆ.
ಜಿಲ್ಲೆಯ ಎಲ್ಲ 16 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹೊಸದಾಗಿ ಬೂತ್, ವಾರ್ಡ್ ಹಾಗೂ ಬ್ಲಾಕ್ ಸಮಿತಿಗಳನ್ನು ರಚಿಸಿ ಜಿಲ್ಲಾ ಸಮಿತಿಗೆ ಮತ್ತು ಕೆಪಿಸಿಸಿಗೆ ವರದಿ ಸಲ್ಲಿಸಬೇಕು. ಅಲ್ಲದೆ, ವಿವಿಧ ಅಂಗ ಟಕಗಳ ಜಿಲ್ಲಾ ಸಮಿತಿ ಮತ್ತು ಬ್ಲಾಕ್ ಸಮಿತಿಗಳನ್ನು ಕೂಡಲೇ ರಚಿಸುವ ಜತೆಗೆ ಪಕ್ಷದ ಸಂಟನೆಯಲ್ಲಿ ತೊಡಗಿಸಿಕೊಂಡವರಿಗೆ ಮೊದಲ ಆದ್ಯತೆ ನೀಡುವಂತೆ ಅವರು ಸಲಹೆ ನೀಡಿದರು.
ಎಐಸಿಸಿ ಕಾರ್ಯದರ್ಶಿ ಗೋಪಿನಾಥ ಪಾಲನಿಯಪ್ಪನ್ ಮಾತನಾಡಿ, ಕಾಂಗ್ರೆಸ್ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿ ಜನಸಾಮಾನ್ಯರ ಬಾಳಿಗೆ ಬೆಳಕಾಗಿದೆ. ಆದರೂ ಪಕ್ಷದ ಕೊಡುಗೆ ಪ್ರಚಾರ ಮಾಡುವಲ್ಲಿ ಹಿಂದೆ ಬಿದ್ದಿದ್ದು, ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಮಿತಿಯವರು ಹೆಚ್ಚಿನ ಪ್ರಚಾರ ನಡೆಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಯಾನಂದ ಪಾಟೀಲ, ಮುಖಂಡರಾದ ಅಬ್ದುಲ ಹಮೀದ ಮುಶ್ರೀಫ್ ಹಾಗೂ ಡಾ. ಪ್ರಭುಗೌಡ ಲಿಂಗದಳ್ಳಿ ಪಕ್ಷ ಸಂಟನೆ ಕುರಿತು ಮಾತನಾಡಿದರು. ಸಾಹೇಬಗೌಡ ಬಿರಾದಾರ ನರ್ವಹಿಸಿದರು.
ನಾಗಠಾಣ ಶಾಸಕ ವಿಠಲ ಕಟಕಧೋಂಡ, ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಮಹ್ಮದ ಇಲಿಯಾಸ ಬೋರಾಮಣಿ, ಡಾ. ಗಂಗಾಧರ ಸಂಬಣ್ಣಿ, ಮಹಾದೇವಿ ಗೋಕಾಕ, ಸುಭಾಸ ಕಾಲೇಬಾಗ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಮೀರ ಅಹ್ಮದ ಬ, ಆರತಿ ಶಹಾಪೂರ, ಗುರು ತಾರನಾಳ, ಬಶೀರಸೇಠ ಬೇಪಾರಿ, ಶಹಾಜಾನ ಮುಲ್ಲಾ, ಬಾಳನಗೌಡ ಪಾಟೀಲ, ಆರ್.ಡಿ. ಹಕ್ಕೆ, ಡಿ.ಎಲ್. ಚವಾಣ, ಎಸ್.ಎಂ. ಪಾಟೀಲ ಗಣಿಯಾರ, ವಿನೋದ ವ್ಯಾಸ, ಡಿ.ಎಚ್. ಕಲಾಲ, ವಿಜಯಕುಮಾರ ಘಾಟಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಐ.ಎಂ. ಇಂಡೀಕರ, ವಸಂತ ಹೊನಮೊಡೆ, ಎಂ.ಎಂ. ಮುಲ್ಲಾ, ವಿದ್ಯಾರಾಣಿ ತುಂಗಳ, ಕೃಷ್ಣಾ ಕಾಮಟೆ, ರಮೇಶ ಗುಬ್ಬೇವಾಡ, ಶಕೀಲ ಬಾಗಮಾರೆ, ಲಾಲಸಾಬ ಕೋರಬು, ಮೊಯಿನ ಶೇಖ, ಮಲ್ಲನಗೌಡ ಬಿರಾದಾರ, ವಿಜಯಕುಮಾರ ಕಾಳೆ, ರಾಜೇಶ್ವರಿ ಚುಳಕೆ, ರವಿ ರಾಠೋಡ, ಮಹಾದೇವ ಬನಸೋಡೆ, ಆನಂದ ಜಾದವ, ಹರೀಶ ಕವಲಗಿ, ದೇವಾನಂದ ಲಚ್ಚಾಣ, ಸಂತೋಷ ಬಾಲಗಾಂವಿ, ಲಕ್ಷ$್ಮಣ ಇಲಕಲ, ಪರಸುರಾಮ ಹೊಸಮನಿ, ಹಮೀದಾ ಪಟೇಲ, ಕಾಶೀಬಾಯಿ ಹಡಪದ, ಸರಿತಾ ನಾಯಕ, ಅವಿನಾಶ ಹೇರಲಗಿ, ನಿಂಗಪ್ಪ ಸಂಗಾಪೂರ, ಕೃಷ್ಣ ಲಮಾಣಿ, ರವಿದಾದ ರಾಠೋಡ, ಭಾರತಿ ಕಾಲೇಬಾಗ, ನಿಂಗಪ್ಪ ಹೊಸಮನಿ, ಮಲ್ಲಿಕಾರ್ಜುನ ಪರಸಣ್ಣವರ, ಫಯಾಜ್ ಕಲಾದಗಿ ಮತ್ತಿತರರಿದ್ದರು.