ಆರೋಗ್ಯ, ಅಧ್ಯಾತ್ಮಕ್ಕೆ ಆದ್ಯತೆ ನೀಡಿ

SWAMIJI
Published on

ಶಿರೋಳ: ಪ್ರತಿಯೊಬ್ಬರೂ ಉತ್ತಮ ಅಹಾರ ಕ್ರಮವನ್ನು ರೂಢಿಸಿಕೊಂಡು ಆರೋಗ್ಯವಾಗಿ ಬದುಕಬೇಕು. ಮಠ- ಮಂದಿರಗಳಿಗೆ ಭೇಟಿ ಅಧ್ಯಾತ್ಮವನ್ನು ಅಳವಡಿಸಿಕೊಳ್ಳಬೇಕು ಎಂದು ಯಚ್ಚರಸ್ವಾಮಿ ಗವಿಮಠದ ಅಭಿನವ ಯಚ್ಚರಸ್ವಾಮೀಜಿ ಹೇಳಿದರು.

ಶ್ರೀ ಯಚ್ಚರಸ್ವಾಮಿ ಗವಿಮಠದ ಜಾತ್ರೆ ಅಂಗವಾಗಿ ದಿ.ಸಂಭಾಜಿ ಡಿ. ಕಲಾಲ ಸ್ಮರಣಾರ್ಥ ಸಂಜಯ ಕಲಾಲ ಗೆಳೆಯರ ಬಳಗದಿಂದ ಮಂಗಳವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ. ಎಚ್.ಎಲ್. ಗಿರಡ್ಡಿ , ಡಾ. ಶಕೀಲ್ ಅಹ್ಮದ, ಡಾ. ಕರೀಶ ಕುಮಾರ, ಡಾ. ನವೀನ ನಂದೆಪ್ಪಗೌಡ್ರ, ಡಾ. ಪದ್ಮಾವತಿ ಎಂ.ಡಿ, ಡಾ. ವೀರಣ್ಣ ಬ್ಯಾಳಿ, ಶಿರೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪಂಕಜಾ ಮೈತ್ರಿ, ಡಾ. ಪ್ರವೀಣ ಸರ್ವೊದೆ, ಡಾ. ಮಹೇಶ ದೇಸಾಯಿ, ಡಾ. ರಿಯಾಜ್ ಅಹ್ಮದ ನಿರಲಗಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿದರು. ಶಿಬಿರದಲ್ಲಿ 20 ಜನ ರಕ್ತದಾನ ಮಾಡಿದರು.

99 ಬಾರಿ ರಕ್ತದಾನ ಮಾಡಿದ ಮಹಡಿಮನಿ ಶಿವಕುಮಾರ ಹಾಗೂ ದಿ.ಹಿರಣಯ್ಯ ದತ್ತಿಪ್ರಶಸ್ತಿ ಪುರಸ್ಕೃತ ವಿರುಪಾಕ್ಷಯ್ಯ ಕಲ್ಲಪ್ಪನವರಮಠ ಅವರನ್ನು ಸನ್ಮಾನಿಸಲಾಯಿತು. ನರಗುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ, ಪ್ರವೀಣ ಯಾವಗಲ್ಲ, ರಾಜುಗೌಡ ಕೆಂಚನಗೌಡ್ರ ಮಾತನಾಡಿದರು. ಪ್ರಕಾಶಗೌಡ ತಿರಕನಗೌಡ್ರ, ಲಾಲಸಾಬ ಅರಗಂಜಿ, ಈರಯ್ಯ ಮಠದ, ಹನಮಂತಗೌಡ ತಿರಕನಗೌಡ್ರ, ಪ್ರಕಾಶ ಸೊಬರದ, ದ್ಯಾಮಣ್ಣ ಶಾಂತಗೇರಿ, ರವಿ ಆಲಗುಂಡಿ ಇದ್ದರು.

ಮಂಜುನಾಥ ಕೊಣ್ಣೂರ, ಸುನಿಲ ಕಳಸದ, ವಿನಾಯಕ ಶಾಲದಾರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net