ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿ

Prize Distribution to winners
Published on

ಗೋಕರ್ಣ: ಎಲ್ಲ ಪ್ರಕಾರದ ಶಿಕ್ಷಣದಲ್ಲಿ ಪಠ್ಯಕ್ರಮಕ್ಕೆ ನೀಡುವಷ್ಟೇ ಪ್ರಾಮುಖ್ಯವನ್ನು ಕಲೆ, ಕ್ರೀಡೆ ಮತ್ತು ಸಾಂಸ್ಕೃತಿಕ ಸಾಧನೆಗಳಿಗೂ ಒದಗಿಸುವ ಪ್ರಯತ್ನ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಆಗಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಹತ್ತಿರದ ಗಂಗೆಕೊಳ್ಳದಲ್ಲಿನ ಕಿತ್ತೂರು ರಾಣಿಚೆನ್ನಮ್ಮ ವಸತಿ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಲಯ ಮಟ್ಟದ ಪ್ರೌಢ ಶಾಲಾ ಪ್ರತಿಭಾ ಕಾರಂಜಿಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಸಭೆಯಲ್ಲಿ ನಾಡುಮಾಸ್ಕೇರಿ ಗ್ರಾಪಂ ಉಪಾಧ್ಯಕ್ಷೆ ವಿಜಯಾ ನಾಯ್ಕ, ವಸತಿ ಶಾಲೆ ಪ್ರಾಚಾರ್ಯ ಎನ್.ಆರ್.ನಾಯಕ, ಮುಖ್ಯೋಪಾಧ್ಯಾಯರಾದ ಸಿ.ಜಿ. ನಾಯಕ್​ದೊರೆ, ಪದ್ಮಾ ನಾಯಕ, ಗ್ರಾಪಂ ಸದಸ್ಯರಾದ ನಾಗರಾಜ ತಾಂಡೇಲ, ದಯಾನಂದ ಮೇತಾ, ಚಂದ್ರಶೇಖರ ನಾಯ್ಕ, ರಾಜೇಶ ನಾಯಕ, ರೋಹಿಣಿ ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net