

ಅಳವಂಡಿ: ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿ, ದೈಹಿಕ ಸಧೃಡತೆಗೆ ಮುಂದಾಗಬೇಕು ಎಂದು ಅಂಗನವಾಡಿ ಮೇಲ್ವಿಚಾರಕಿ ರೆಹಮತ್‌ಬೀ ಬೆಣಕಲ್ ಹೇಳಿದರು.
ಗ್ರಾಮದ 3ನೇ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕಲಿಕೆ ಟಾಟಾ ಟ್ರಸ್ಟ ಸಹಯೋಗದಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಚಾಲನೆ ನೀಡಿ ಮಾತನಾಡಿದರು.
ಪೋಷಕರು ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಮಕ್ಕಳೊಂದಿಗೆ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಮಕ್ಕಳ ಶಾಲಾ ಪೂರ್ವ ಶಿಕ್ಷಣ ಉತ್ತಮವಾಗಿರಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಸಂಜೀವಿನಿ ಮಹಿಳಾ ಸಂಘದ ಎಮ್‌ಬಿಕೆ ಮಲ್ಲಮ್ಮ ಭಾವಿಹಳ್ಳಿ, ಅಂಗನವಾಡಿ ಕಾರ್ಯಕರ್ತೆ ಮರಿಬಸಮ್ಮ ಕರ್ಕಿಹಳ್ಳಿ, ಪಾಲಕರಾದ ಷಹನಾಜ, ಜಬೀನ, ರೇಷ್ಮಾ, ಮಾಬೂಬಿ, ಮಾಬುಲ್, ಸಾವಿತ್ರಿ, ಸೂಶಿಲವ್ವ, ಲಕ್ಷ್ಮೀ, ಶಿಲ್ಪಾ, ವಿಜಯಲಕ್ಷ್ಮೀ ಇದ್ದರು.