ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ: ಮಧು ಬಂಗಾರಪ್ಪ

5 smg 4
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಉಡುಪಿಯ ಕರಾಟೆ ಪಟುಗಳಾದ ಆಯುಷ್ ಮತ್ತು ಛಾಯಾ ಅವರನ್ನು ಸಚಿವ ಮಧು ಬಂಗಾರಪ್ಪ ಅಭಿನಂದಿಸಿದರು. ಎಚ್.ಸಿ.ಯೋಗೇಶ್, ಎನ್.ರಮೇಶ್, ಎಸ್.ಶಿವಕುಮಾರ್, ಎಸ್.ರವಿಕುಮಾರ್, ಜಿ.ಡಿ.ಮಂಜುನಾಥ, ಶಿವಮೊಗ್ಗ ವಿನೋದ್ ಇದ್ದರು.
Published on

ಶಿವಮೊಗ್ಗ: ಮಕ್ಕಳು ವಿದ್ಯಾಭ್ಯಾಸದೊಂದಿಗೆ ಕ್ರೀಡೆ ಮತ್ತು ಇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಲಹೆ ನೀಡಿದರು.

ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಎರಡು ದಿನಗಳ ಶಿವಮೊಗ್ಗ ಓಪನ್ 4ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಎಲ್ಲ ರೀತಿಯಲ್ಲಿ ಬೆಳೆಯಬೇಕು. ಅದಕ್ಕಾಗಿ ವಿದ್ಯೆಯೊಂದಿಗೆ ಈ ರೀತಿಯ ಚಟುವಟಿಕೆಗಳು ಅಗತ್ಯವಾಗಿದೆ ಎಂದರು.
ಜಿಲ್ಲಾಮಟ್ಟದಲ್ಲಿ ನಡೆಯುವ ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಸರ್ಕಾರದಿಂದ ದೊರಕುವ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್ ಮಾತನಾಡಿ, ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಅಂತರ ರಾಷ್ಟ್ರ ಮಟ್ಟದ ಈ ಪಂದ್ಯಾವಳಿಯಲ್ಲಿ 1,200 ಸ್ಪರ್ಧಿಗಳು, 78 ತೀರ್ಪುಗಾರರು, ಕೋಚ್‌ಗಳು ಭಾಗವಹಿಸಿದ್ದಾರೆ ಎಂದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಉಡುಪಿ ತಂಡದ ಕರಾಟೆ ಪಟುಗಳಾದ ಆಯುಷ್, ಛಾಯಾ, ವರ್ಲ್ಡ್ ಗ್ರಾೃಂಡ್ ಮಾಸ್ಟರ್‌ಗಳಾದ ರಾಜ್ಯದ ಅಫ್ತಾಬ್, ಶ್ರೀಲಂಕಾದ ಹಂಶಿ ಮೆಡೊನ್ಝಾ, ನೇಪಾಳದ ಅರುಣ್ ಕರ್ಕಿ ಮತ್ತು ಅಮೆರಿಕಾದ ಪೆರಿ ಎಫ್.ಮೌಲಾ ಅವರನ್ನು ಸನ್ಮಾನಿಸಲಾಯಿತು.
ಗೋಣಿ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸೂಡಾ ಮಾಜಿ ಅಧ್ಯಕ್ಷ ಎನ್.ರಮೇಶ್, ಮೇಯರ್ ಎಸ್.ಶಿವಕುಮಾರ್, ಪಾಲಿಕೆ ಪ್ರತಿಪಕ್ಷದ ನಾಯಕಿ ರೇಖಾ ರಂಗನಾಥ್, ಮುಖಂಡರಾದ ಎಸ್.ರವಿಕುಮಾರ್, ವಿಶ್ವನಾಥ ಕಾಶಿ, ಸಾಮೀರ್ ಖಾನ್, ಜಿ.ಡಿ.ಮಂಜುನಾಥ, ರಾಜ್ಯ ಕರಾಟೆ ಸಂಘದ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net