ಸಮಾಜದಲ್ಲಿ ಶಿಕ್ಷಣಕ್ಕೆ ಆದ್ಯತೆ ಕೊಡಿ

jayantu
ತೇರದಾಳ ಸಮೀಪದ ಹಳಿಂಗಳಿ ಗ್ರಾಮದಲ್ಲಿ ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು. ಕಮರಿಮಠದ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಗ್ರಾಪಂ ಅಧ್ಯಕ್ಷ ಪ್ರದೀಪ ನಂದೆಪ್ಪನವರ, ಸುರೇಶ ಭಜಂತ್ರಿ, ಶ್ರೀಮಂತ ಖಾನಗೊಂಡ ಇತರರಿದ್ದರು.
Published on

ತೇರದಾಳ: ಶರಣರು, ಸ್ವಾಮೀಜಿಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಬದುಕಿದವರು. ಅಂತಹ ಶರಣರಲ್ಲಿ ವಚನಕಾರ ನುಲಿಯ ಚಂದದಯ್ಯನವರೂ ಒಬ್ಬರಾಗಿದ್ದಾರೆ ಎಂದು ಹಳಿಂಗಳಿ ಕಮರಿಮಠದ ಸದ್ಗುರು ಶಿವಾನಂದ ಶ್ರೀ ಹೇಳಿದರು.

ಸಮೀಪದ ಹಳಿಂಗಳಿ ಗ್ರಾಮದಲ್ಲಿ ನುಲಿಯ ಚಂದಯ್ಯ ಸಮಾಜದವರು ಶುಕ್ರವಾರ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾಜ ನನಗೆ ಏನು ನೀಡಿದೆ ಎನ್ನುವ ಬದಲು ಈ ಸಮಾಜಕ್ಕೆ ನನ್ನ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಅತ್ಯಂತ ಶ್ರಮ ಜೀವಿಯಾಗಿರುವ ನುಲಿಯ ಚಂದಯ್ಯ ಅವರ ಸಮುದಾಯ ಶೈಕ್ಷಣಿಕವಾಗಿಯೂ ಪ್ರಗತಿ ಹೊಂದಿರಬೇಕು ಎಂದರು. ಗ್ರಾಪಂ ಅಧ್ಯಕ್ಷ ಪ್ರದೀಪ ನಂದೆಪ್ಪನವರ ಕಾರ್ಯಕ್ರಮ ಉದ್ಘಾಟಿಸಿದರು.

ಸುರೇಶ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶ್ರೀಮಂತ ಖಾನಗೊಂಡ, ಪ್ರಕಾಶ ಭಜಂತ್ರಿ, ಸಾಬು ಭಜಂತ್ರಿ, ಸಾಬು ಭಜಂತ್ರಿ, ಯಶವಂತ ಭಜಂತ್ರಿ, ರಮೇಶ ಭಜಂತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net