ಕುಡಿಯುವ ನೀರಿಗೆ ಆದ್ಯತೆ ನೀಡಿ

30RAM1
Published on

ರಾಮದುರ್ಗ: ತಾಲೂಕಿನ ವಿವಿಧ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಸ್ಥಳಿಯ ಗ್ರಾಮ ಪಂಚಾಯಿತಿಯಿಂದ ಒದಗಿಸಲಾದ ಮೂಲಸೌಲಭ್ಯಗಳ ಕುರಿತು ಜನರೊಂದಿಗೆ ಸಂವಾದ ನಡೆಸಿದರು.

ಕೆ.ಚಂದರಗಿ, ಎಂ.ಚಂದರಗಿ, ಗುದಗೊಪ್ಪ, ಹಿರೇಕೊಪ್ಪ ಕೆ.ಎಸ್​ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಅಲ್ಲಿನ ಕುಡಿಯುವ ನೀರಿನ ವ್ಯವಸ್ಥೆ, ಜಲಜೀವನ ಮಿಷನ್​ ಯೋಜನೆಯ ಅನುಷ್ಠಾನ ಕಾಮಗಾರಿ ಪರಿಶೀಲಿಸಿದರು.

ಕೆಲ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಗಳು ಅಪೂರ್ಣ, ಸಮರ್ಪಕ ನೀರು ಪೂರೆಕೆಯಲ್ಲಿ ತೊಂದರೆ, ಶುಚಿತ್ವ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಸ್ಥಳಿಯರು ದೂರು ನೀಡಿದರು. ಜೆಜೆಎಂ ಕಾಮಗಾರಿ ಕೂಡಲೇ ಮುಗಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಹುಲ ಶಿಂಧೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶುಚಿತ್ವ, ಕುಡಿಯುವ ನೀರಿನ ಪೂರೆಕೆಯಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ, ಮೂಲಸೌಲಭ್ಯಗಳ ಬಗ್ಗೆ ಜನತೆಯಿಂದ ದೂರು ಕೇಳಿ ಬರದಂತೆ ಗ್ರಾಪಂ ಅಭಿವದ್ಧಿ ಅಧಿಕಾರಿಗಳು ಮುತುವರ್ಜಿ ವಹಿಸಿ, ಕೆಲಸ ಮಾಡಬೇಕು. ದೂರು ಕೇಳಿ ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೆಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೆರ್ಮಲ್ಯ ಇಲಾಖೆ ಬೆಳಗಾವಿ ಕಾರ್ಯನಿರ್ವಾಹಕ ಅಭಿಯಂತ ಕಿರಣ ೂರ್ಪಡೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ, ಸಿಡಿಪಿಒ ಶಂಕರ ಕುಂಬಾರ, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾ ಪಂ ಅಧ್ಯರು, ಸದಸ್ಯರು ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net