ವಿಪ ಚುನಾವಣೆಗೆ ಚಲವಾದಿ ಸಮುದಾಯಕ್ಕೆ ಆದ್ಯತೆ ನೀಡಿ

Give priority to Chalawadi community for vipa elections
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಚಲವಾದಿ ಸಮುದಾಯದ ಮುಖಂಡ ಪ್ರೇಮನಾಥ ಗರಸಂಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಸವರಾಜ ಚಲವಾದಿ, ಶರಣಪ್ಪ ಅಮದಿಹಾಳ, ರವಿ ಬಬಲೇಶ್ವರ, ಬಸವರಾಜ ಹಳ್ಳದಮನಿ ಹಾಗೂ ಶ್ರವಣ ಕಾತೇದಾರ ಇತರರಿದ್ದರು.
Published on

ಬಾಗಲಕೋಟೆ: ವಿಧಾನಸಭೆಯಿಂದ ವಿಧಾನಪರಿಷತ್ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಜಿಲ್ಲೆಯ ಚಲವಾದಿ ಸಮುದಾಯದವರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಚಲವಾದಿ ಸಮುದಾಯದ ಮುಖಂಡ ಪ್ರೇಮನಾಥ ಗರಸಂಗಿ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಡೆದ ಯಾವುದೇ ಸ್ಥಳೀಯ ಸಂಸ್ಥೆ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲೂ ಚಲವಾದಿ ಸಮುದಾಯಕ್ಕೆ ಆದ್ಯತೆ ನೀಡಿಲ್ಲ. ಕಾರಣ ಈ ಬಾರಿ ಜಿಲ್ಲೆಗೆ ಆದ್ಯತೆ ನೀಡಲೇಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಈವರೆಗೆ ನಿಷ್ಠೆಯಿಂದ ಲಾಪೇಕ್ಷೆ ಬಯಸದೇ ಸೇವೆ ಸಲ್ಲಿಸುತ್ತಿರುವ ಬಾದಾಮಿ ತಾಲೂಕಿನ ಡಾ. ಎಂ.ಎಚ್.ಚಲವಾದಿ ಅವರು, ಪಕ್ಷದ ವಿವಿಧ ಸ್ಥರಗಳಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಕೆಲಸ ಮಾಡಿದ್ದಾರೆ. ಸಮಾಜಕ್ಕಷ್ಟೇ ಅಲ್ಲದೇ ಉಳಿದ ಸಮಾಜಗಳ ಅಭಿವೃದ್ಧಿಗೂ ಸಹ ಚಲವಾದಿ ಅವರು ಶ್ರಮಿಸಿದ್ದಾರೆ ಎಂದರು.

ಇಷ್ಟೆಲ್ಲ ಕೆಲಸಗಳನ್ನು ಮಾಡಿರುವ ಚಲವಾದಿ ಅವರು, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬೇಕಿರುವ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ. ಪಿಎಚ್.ಡಿ ಪಡೆದಿರುವ ವಲವಾದಿ ಅವರನ್ನು ವಿಪ ಸ್ಥಾನಕ್ಕೆ ಸೂಚಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ ಅವರನ್ನು ಒತ್ತಾಯಿಸಿದರು.

ಮುಖಂಡರಾದ ಬಸವರಾಜ ಚಲವಾದಿ, ಶರಣಪ್ಪ ಅಮದಿಹಾಳ, ರವಿ ಬಬಲೇಶ್ವರ, ಬಸವರಾಜ ಹಳ್ಳದಮನಿ ಹಾಗೂ ಶ್ರವಣ ಕಾತೇದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net