

ಲಕ್ಷ್ಮೇಶ್ವರ: ಪಟ್ಟಣದ ವಿನಾಯಕ ನಗರದ, ವಿನಾಯಕ ನಗರ ಅಭಿವೃದ್ಧಿ ಸಮಿತಿಯಿಂದ ಪ್ರತಿಷ್ಠ್ಠಾಪನೆಗೊಂಡ ಗಣೇಶ ಮೂರ್ತಿಯ 2ನೇ ವಷರ್ದ ವಾರ್ಷಿಕೋತ್ಸವ ಅಂಗವಾಗಿ ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಪಿಎಸ್‌ಐ ಈರಪ್ಪ ರಿತ್ತಿ ಮಾತನಾಡಿ, ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಇಂದಿನ ಯುವ ಜನಾಂಗ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಮರೆಯುತ್ತಿರುವುದು ವಿಷಾದದ ಸಂಗತಿಯಾಗಿದೆ. ಅಲ್ಲದೆ, ಗಣೇಶನ ಹಬ್ಬಕ್ಕೆ ಇರುವ ಹಿನ್ನೆಲೆಯನ್ನು ಮಕ್ಕಳಿಗೆ ತಿಳಿಸಿಕೊಡುವಂಥ ಕಾರ್ಯಕ್ರಮಗಳು ಮೂಡಿಬರಬೇಕಾಗಿದೆ ಎಂದರು.
ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ, ಉದ್ಯಮಿ ಲೋಹಿತ ನೆಲವಗಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಫಿರ್ದೋಷ ಆಡೂರ, ವಿನಾಯಕ ನಗರ ಅಭಿವೃದ್ಧಿ ಸಮಿತಿ ಗೌರಾವಧ್ಯಕ್ಷ ಚಂಬಣ್ಣ ಬಾಳಿಕಾಯಿ, ಅಧ್ಯಕ್ಷ ಮಂಜುನಾಥ ಹೊಗೆಸೊಪ್ಪಿನ, ಮುಖ್ಯಾಧಿಕಾರಿ ಮಹೇಶ ಹಡಪದ, ವಿಜಯ ಹತ್ತಿಕಾಳ, ಜವಾಹರಸಾ ಪವಾರ, ಸರೋಜಕ್ಕ ಬನ್ನೂರ, ಸತೀಶ ಪಾಟೀಲ, ಜಗದೀಶ ಆಚಾರಿ, ಎಂ.ಎಂ. ಎಲಿಮಠ, ರುದ್ರಮುನಿ ಗಂಟಾಮಠ, ರವಿ ಬೋಮಲೆ, ವಿಠ್ಠಲ್ ಬದಿ, ಸತ್ಯಂದ್ರ ಸಬಾವಡಿಮಠ, ಡಾ. ಸಿದ್ದಪ್ಪ ನೇಕಾರ, ಭರತ ಜೈನ, ರಂಗಣ್ಣ ಬದಿ, ಮಂಜುನಾಥ ಕೊಡ್ಲಿ, ಮಂಜುನಾಥ ಉಮಚಗಿ ಇದ್ದರು. ವೀರಭದ್ರಯ್ಯ ಹಿರೇಮಠ, ಅನ್ನಪೂರ್ಣೇಶ್ವರಿ ಹಿರೇಮಠ, ವೀರೇಶ ಸಾಸಲವಾಡ, ರಾಘವೇಂದ್ರ ಕಡೆಮನಿ ನಿರೂಪಿಸಿದರು.