ನೊಣವಿನಕೆರೆ: ತೆಂಗಿನಕಾಯಿ ವ್ಯಾಪಾರಕ್ಕೆ ಬಂದು ಅಂಗಡಿಯಲ್ಲಿ ಇಟ್ಟಿದ 4 ಲಕ್ಷ ರೂ. ಕಳ್ಳತನ ಮಾಡಿರುವ ಘಟನೆ ಗುರುವಾರ ನಡೆದಿದೆ. ತಿಪಟೂರು ತಾಲೂಕು ನೊಣವಿನಕೆರೆ ಗುಂಗುರಮಳೆ ರಸ್ತೆಯ ವಿನೋದ್ ಬಿಲ್ಡಿಂಗ್ನಲ್ಲಿರುವ ಮಂಜುಳಾ ಎಂಬುವವರಿಗೆ ಸೇರಿದ ಭುವನರಾಶಿ ಟ್ರೇಡರ್ನಲ್ಲಿ ಅಪರೀಚಿತ ವ್ಯಕ್ತಿ ಬಂದು 100 ತೆಂಗಿನಕಾಯಿ ಬೇಕು ಎಂದು ಕೇಳಿದ್ದಾರೆ. ಅಂಗಡಿ ಮಾಲೀಕಿ ಮಂಜುಳಾ ಕಾಯಿ ತುಂಬಲು ಗೋಡಾನ್ಗೆ ಹೋದಾಗ ಕ್ಯಾಶ್ ಟೇಬಲ್ ಕೆಳಗೆ ಬ್ಯಾಗ್ನಲ್ಲಿ ಇಟ್ಟಿದ್ದ 4 ಲಕ್ಷ ರೂ. ಕಳ್ಳತನ ಮಾಡಿದ್ದಾನೆ. ಬ್ಯಾಗ್ನಲ್ಲಿದ್ದ ಆಧಾರ್ಕಾರ್ಡ್, ಕರ್ನಾಟಕ ಬ್ಯಾಂಕ್ ಪಾಸ್ಬುಕ್, ಫಿನ್ಕೇರ್ ೈನಾನ್ಸ್ ಎಟಿಎಂ ಕಾರ್ಡ್ ಕಳುವಾಗಿದೆ. ತಕ್ಷಣ ನೊಣವಿನಕೆರೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.