

ಇಂಡಿ: ಗುಣಮಟ್ಟದ ಧಾನ್ಯ ಉತ್ಪಾದನೆಗೆ ಪ್ರಾಶಸ ನೀಡೋಣ ಎಂದು ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ. ಬೆಳ್ಳಿ ತಿಳಿಸಿದರು.
ಪಟ್ಟಣದ ಆರ್.ಎಂ. ಶಹಾ ಶಾಲೆಯಲ್ಲಿ ಉತ್ಥಾನ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಕೃಷಿ ಮೇಳ ಮತ್ತು ತಾಲೂಕಿನ ಕೃಷಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಸಿರು ಕ್ರಾಂತಿಯ ನಂತರ ದೇಶದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ಭೂಮಿ ಕಲುಷಿತವಾಗುತ್ತಿದೆ. ರೈತರು ಶೂನ್ಯ ಬಂಡವಾಳ, ಸಾವಯುವ ಕೃಷಿ ಹಾಗೂ ಸುಸ್ಥಿರ ಕೃಷಿಯ ಮೂಲಕ ಆರೋಗ್ಯದ ಕಡೆಗೂ ಗಮನ ನೀಡಬೇಕು. ಯುವಜನತೆ ಕೃಷಿಯ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ ಮಾತನಾಡಿ, ಕೃಷಿಯ ಜತೆಗೆ ಉಪ ಕಸಬುಗಳಾಗಿ ಜೇನು ಹುಳು ಸಾಕಾಣಿಕೆ, ನಿಂಬೆ ಮೌಲ್ಯವರ್ಧನೆ ಮುಂತಾದವುಗಳ ಮೂಲಕ ಲಾಭಗಳಿಸಲು ಸಾಧ್ಯ ಎಂದರು.
ಡಾ. ಹೀನಾ, ಸುನೀಲ ಕುಲಕರ್ಣಿ,ಕಾವ್ಯ ಬಾಗಲಕೋಟ, ಸುಕನ್ಯಾ ನಾಕೋಡ, ವಿಜಯಕುಮಾರ ನರಕಿ, ಬಾಹುಬಲಿ ಪಂಡಿತ ಮಾತನಾಡಿದರು. ಕಷಿಯಲ್ಲಿ ಸಾಧನೆ ಮಾಡಿದ ಪ್ರಗತಿಪರ ರೆತರಾದ ಬೀರಪ್ಪ ವಗ್ಗಿ, ಎಸ್.ಟಿ.ಪಾಟೀಲ, ರಾಜಶೇಖರ ನಿಂಬರಗಿ, ಶರಣಪ್ಪ ಮಜ್ಜಿಗೆ, ಭಾರತಿ ಮೆಂಡೆಗಾರ, ಅಂಕಿತಾ ಪಾಟೀಲ, ಭೀಮನ ಗೌಡ ಪಾಟೀಲ, ವೀಣಾ ಜಂಬಗಿ ಅವರನ್ನು ಸನ್ಮಾನಿಸಲಾಯಿತು.
ಶಿಕ ಭಿಮರಾಯ ಕಡಹಳ್ಳಿ ಪ್ರಗತಿಪರ ರೈತರಾದ ಚಿದಂಬರ ಕುಲಕರ್ಣಿ, ಸಂಜೀವ ಕುಮಾರ ಮಾಲಗಾರ, ಬಸು ಹೂಗಾರ , ಮಲ್ಲೆಶಪ್ಪಾ ಕಲ್ಯಾಣ ಶೆಟ್ಟಿ ಮತ್ತಿತರಿದ್ದರು. ಕೃಷಿಮಳಿಗೆಗಳ ಮೂಲಕ 100ಕ್ಕೂ ಅಧಿಕ ರೈತರು ವಸ್ತು ಪ್ರದರ್ಶನ ಎರ್ಪಡಿಸಿದ್ದರು.