ಎಣ್ಣೆ ಕಾಳು ಬೆಳೆಗಳಿಗೆ ಆದ್ಯತೆ ನೀಡಿ

ಎಣ್ಣೆ ಕಾಳು ಬೆಳೆಗಳಿಗೆ ಆದ್ಯತೆ ನೀಡಿ
Published on

ಲಿಂಗಸುಗೂರು: ದೇಶದ ಆಹಾರ ಭದ್ರತೆಯಲ್ಲಿ ಬೇಳೆ ಮತ್ತು ಎಣ್ಣೆ ಕಾಳುಗಳು ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥೆ ಡಾ.ವಾಣಿಶ್ರೀ ಹೇಳಿದರು.


ಬಸಾಪುರ ಗ್ರಾಮದ ರೈತರ ಜಮೀನಿನಲ್ಲಿ ಕುಸುಬೆ ಮತ್ತು ಕಡಲೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಎಣ್ಣೆಕಾಳು ಮತ್ತು ಬೇಳೆ ಕಾಳು ಉತ್ಪಾದನೆ ಹೆಚ್ಚಿಸಲು ಹೊಸ ತಳಿಯ ಸೂಪರ್ ಅಣ್ಣಿಗೇರಿ ಕಡಲೆ ಹಾಗೂ ಎಸ್-144 ತಳಿಯ ಕುಸುಬೆ ಬೇಳೆ ಕಾಳಿನ ಬಗ್ಗೆ ರೈತರಿಗೆ ಪ್ರಾತ್ಯಕ್ಷತೆಗೆ ನೀಡಲಾಗಿತ್ತು. ಎಣ್ಣೆ ಕಾಳು ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದರು.


ಕೇಂದ್ರದ ವಿಷಯ ತಜ್ಞೆ ರೇಣುಕಾ ಬಿರಾದಾರ್ ಕಡಲೆ ಮತ್ತು ಕುಸುಬೆ ಬೆಳೆಯಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ ಹಾಗೂ ತೋಟಗಾರಿಕೆ ಬೆಳೆಗಳ ಬೇಸಾಯ ಕ್ರಮಗಳ ಕುರಿತು ರೈತರಿಗೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net