ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಿ

Untitled design (1)
Published on

ಹಟ್ಟಿಚಿನ್ನದಗಣಿ: ಓದುವ ಅಭಿಯಾನ ಕಾರ್ಯಕ್ರಮ ಮಕ್ಕಳಲ್ಲಿ ಮಾತೃಭಾಷಾ ಕಲಿಕೆ ಮತ್ತು ಸರಳ ಗಣಿತ ಕೌಶಲಗಳ ಅಭಿವೃದ್ಧಿಗೆ ಪರಿಣಾಮಕಾರಿಯಾಗಿದೆ ಎಂದು ಮುಖ್ಯ ಶಿಕ್ಷಕಿ ಉಷಾ ಹೇಳಿದರು.


ಸಮೀಪದ ನಿಲೋಗಲ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಸಿದ್ದ ನೂರು ದಿನಗಳ ಓದುವ ಅಭಿಯಾನದ ಐದನೇ ವಾರದ ಚಟುವಟಿಕೆ ಪರಿಶೀಲನಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ನೂರು ದಿನಗಳ ಓದುವ ಅಭಿಯಾನ ಹಾಗೂ 60 ದಿನಗಳ ಓದು ಕರ್ನಾಟಕ ಕಾರ್ಯಕ್ರಮದಲ್ಲಿ 1ರಿಂದ 5ನೇ ತರಗತಿ ಮಕ್ಕಳಿಗೆ ಕಥೆ, ಕವನ, ಶಾಲಾ ಗ್ರಂಥಾಲಯಕ್ಕೆ ಭೇಟಿ, ಅಭಿನಯ, ವೇಷಭೂಷಣ ಸ್ಪರ್ಧೆಗಳು ಖುಷಿ ನೀಡಿವೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಬೇಕು. ಕರೋನಾ ಕಾರಣದಿಂದ ಮಕ್ಕಳು ಶಾಲಾ ಪರಿಸರದಲ್ಲಿ ಕಲಿಯುವ ಅವಕಾಶದಿಂದ ವಂಚಿತರಾಗಿದ್ದು, ಮತ್ತೆ ಶಾಲಾ ಪರಿಸರಕ್ಕೆ ಉತ್ಸಾಹದಿಂದ ಹೊಂದಿಕೊಳ್ಳಲು ಇಂತಹ ಕಾರ್ಯಕ್ರಮಗಳು ಪೂರಕವಾಗಲಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net