ದುಡಿಮೆಯ ಭಾಗ ಸಮಾಜ ಸೇವೆಗೆ ನೀಡಿ

29bhr 2
ಬಾಳೆಹೊನ್ನೂರು ಸಮೀಪದ ಸೀಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ಸಹಯೋಗದಲ್ಲಿ ಬ್ಯಾಂಡ್ ಸೆಟ್ ನೀಡಲಾಯಿತು.
Published on

ಬಾಳೆಹೊನ್ನೂರು: ಸಂಘ ಸಂಸ್ಥೆಯ ಪಧಿಕಾರಿಗಳು ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಡಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ ಹೇಳಿದರು.
ಸೀಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ಸಹಯೋಗದಲ್ಲಿ ಸೋಮವಾರ ಬ್ಯಾಂಡ್‌ಸೆಟ್ ವಿತರಿಸಿ ಮಾತನಾಡಿದ ಅವರು, ಕೆಲವು ಸರ್ಕಾರಿ ಶಾಲೆಗಳಿಗೆ ದಾನಿಗಳೇ ಆಧಾರ ಸ್ತಂಭ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಸಂಘ, ಸಂಸ್ಥೆಗಳು ತಮ್ಮಿಂದಾದ ವಿವಿಧ ಕೊಡುಗೆ ನೀಡಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಅನುಕೂಲವಾಗಲಿದೆ ಎಂದರು.
ಬ್ಯಾಂಡ್ ಸೆಟ್ ದಾನಿ ಗೋವಿಂದೇಗೌಡ ಮಾತನಾಡಿ, ಆಧುನಿಕ ಹಾಗೂ ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆ ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಶಾಲೆಗೆ ಬೇಕಾದ ಅಗತ್ಯ ವಸ್ತುಗಳನ್ನು ರೋಟರಿ ಸಹಯೋಗದಲ್ಲಿ ನೀಡಲಾಗುತ್ತಿದೆ ಎಂದರು. ರೋಟರಿ ಸದಸ್ಯರಾದ ಕೆ.ಟಿ.ವೆಂಕಟೇಶ, ಎ.ಸಿ.ಸಂದೇಶ್, ಕೆ.ಸುಧಾಕರ್, ಎಸ್‌ಡಿಎಂಸಿ ಅಧ್ಯಕ್ಷ ಸುಧಾಕರ್, ಮುಖ್ಯಶಿಕ್ಷಕಿ ಗ್ರೇಸಿ, ಶಿಕ್ಷಕರಾದ ಜ್ಯೋತಿ, ಸಾಂಗವಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net