ಅಂಗವಿಕಲರಿಗೆ ಅವಕಾಶ ಕಲ್ಪಿಸಿ

indira glass house
Published on

ಹುಬ್ಬಳ್ಳಿ: ಅಂಗವಿಕಲರ ಬಗ್ಗೆ ಕನಿಕರ-ಅಸಡ್ಡೆ ತೋರುವುದು ಬೇಡ. ಅವರಿಗೆ ಸಮಾಜವು ಅವಕಾಶಗಳನ್ನು ಒದಗಿಸಿ ಕೊಡಬೇಕು. ಅವಕಾಶಗಳನ್ನು ಸೃಷ್ಟಿಸಿದ್ದಲ್ಲಿ ಮಾತ್ರ ಅಂಗವಿಕಲರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳ್ಳಿ ಇಂದಿರಾ ಗಾಜಿನಮನೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸುಧಾಚಂದ್ರನ್, ಮಾಲತಿ ಹೊಳ್ಳ, ನಮ್ಮ ಜಿಲ್ಲೆಯವರೇ ಆದ ದೇವಪ್ಪ ಮೋರೆ, ಇನ್ನು ಅನೇಕರು ಅಪಾರ ಸಾಧನೆ ಮಾಡಿದ್ದು, ಅಂಗವಿಕಲರಿಗೆ ಪ್ರೇರಣೆ ಕೊಡುವ ಕೆಲಸ ಮಾಡುತ್ತ ಬಂದಿದ್ದಾರೆ ಎಂದರು.

ಅಂಗವಿಕಲರ ಹಿತಾಭಿವೃದ್ಧಿಗೆ ಶ್ರಮಿಸಿದ ಮಾಲತೇಶ ಕುರ್ತಕೋಟಿ, ರೂಪಾ ಮುಗಳಿ, ಜಟ್ಟೆಪ್ಪ ಪೂಜಾರ, ಅಂಬಿಕಾ ಮಸ್ಕಿ, ಶ್ರೀಶೈಲ ಸವದತ್ತಿ, ಗಣೇಶ ಶ್ಯಾಗೋಟಿ, ಇತರರನ್ನು ಸನ್ಮಾನಿಸಲಾಯಿತು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಅಂಗವಿಕಲ ಮಕ್ಕಳಿಗೆ ಪ್ರಶಸ್ತಿ, ಪ್ರಮಾಣ ಪತ್ರ ವಿತರಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಪದ್ಮಾವತಿ ಜಿ., ಉತ್ತರ ಕರ್ನಾಟಕ ಸಕ್ಷಮ ಪ್ರಾಧಿಕಾರದ ಅಧ್ಯಕ್ಷ ಎಸ್.ಬಿ. ಶೆಟ್ಟಿ, ಇನ್ನರ್ ವ್ಹೀಲ್ ಕ್ಲಬ್ ಹುಬ್ಬಳ್ಳಿ ಪಶ್ಚಿಮದ ಅಧ್ಯಕ್ಷೆ ವಿಜಯಲಕ್ಷ್ಮೀ ಕೆ., ಐ.ಕೆ. ಲಕ್ಕುಂಡಿ, ಡಿ.ಡಿ. ಮೇಚೆನವರ್, ಗುರು ಲಕ್ಕುಂಡಿ, ಇತರರು ಇದ್ದರು.

ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯ ಅಧಿಕಾರಿ ಕೆ.ಜಗದೀಶ ಸ್ವಾಗತಿಸಿದರು. ಶಿಕ್ಷಕರಾದ ಅಣ್ಣಪ್ಪ ಕೋಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹು-ಧಾ ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಿಮ್ಸ್-ಆಶಾಕಿರಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಇನ್ನರ್ ವ್ಹೀಲ್ ಕ್ಲಬ್ ಹುಬ್ಬಳ್ಳಿ-ಪಶ್ಚಿಮ, ಸಕ್ಷಮ ಉತ್ತರ ಕರ್ನಾಟಕ ಪ್ರಾಂತ ಇವುಗಳ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net