

ಅಣ್ಣಿಗೇರಿ: ಹಿರಿಯ ನಾಗರಿಕರಿಗೆ ಮಾಸಿಕ 10 ಸಾವಿರ ರೂ. ವೃದ್ಧಾಪ್ಯ ವೇತನ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಎದುರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಬಳಿಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಸಿ.ಎಂ. ವೇರ್ಣೆಕರ ನೇತೃತ್ವದಲ್ಲಿ ತಹಸೀಲ್ದಾರ್ ಮಂಜುನಾಥ ಡಾಕಪ್ಪನವರಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರಕ್ಕೆ ರಾಷ್ಟ್ರದ ಎಲ್ಲ ಹಿರಿಯ ನಾಗರಿಕರನ್ನು ದೇಶದ ಸಂಪತ್ತು ಎಂದು ಘೊಷಣೆ ಮಾಡಬೇಕು. ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಮಂತ್ರಾಲಯ, ಸಚಿವರನ್ನು ನೇಮಕ ಮಾಡಬೇಕು ಎಂದು ತಾಲೂಕಾಧ್ಯಕ್ಷ ಸಿ.ಎಂ. ವೇರ್ಣೆಕರ್ ಒತ್ತಾಯಿಸಿದರು.
ತಹಸೀಲ್ದಾರ್ ಕಚೇರಿ ಅಧಿಕಾರಿ ಶಾಂತವ್ವ ಕುನ್ನಿಬಾವಿ ಮನವಿ ಸ್ವೀಕರಿಸಿದರು. ಪಿ.ಡಿ. ಅಂದಾನಿಗೌಡ್ರ, ಸಿ.ಆರ್. ಚಾಕಲಬ್ಬಿ, ಎಫ್.ಎಂ. ಕಪ್ಪತ್ತನವರ, ಎಚ್.ಡಿ. ಡಬರಿ, ಎನ್.ಎನ್. ರಾವುತ, ಬಸಯ್ಯ ಹಿರೇಮಠ, ಆರ್.ಎಂ. ಜಗತಾಪ, ಎಲ್.ಎಂ. ಹೊಸಳ್ಳಿ, ವಿ.ವಿ. ಗಿರಡ್ಡಿ, ಸಿ.ಎಸ್. ಹೊಳೆಯನ್ನವರ, ಎಂ.ಬಿ. ಕಾಕನಗರ ಬಾಳಪ್ಪ ನರಗುಂದ, ಎಂ.ಎಂ. ಮೀಶಿಯವರ, ಎ.ಡಿ. ಗಣೇಶಕರ, ಡಿ.ಬಿ. ಕಳ್ಳಿಮನಿ, ಪಾರ್ವತವ್ವ ಕಿತ್ತೂರು, ಚನ್ನಮ್ಮ ನವಲಗುಂದ, ಇತರರಿದ್ದರು.