ಸೂಕ್ತ ಸಮಯದಲ್ಲಿ ಅಗತ್ಯ ಸಲಹೆ ನೀಡಿ

kvk
ಕೃಷಿ ಸಖಿಯರ ತರಬೇತಿ ಕಾರ್ಯಾಗಾರವನ್ನು ಡಾ.ಗಣೇಶ್ ನಾಯ್ಕ ಉದ್ಘಾಟಿಸಿದರು. ಡಾ.ಕೆ.ಟಿ.ಗುರುಮೂರ್ತಿ, ಡಾ.ಎನ್.ಸಹನಾ, ಡಾ.ಎನ್.ಸುಧಾರಾಣಿ, ಡಾ.ಎಂ.ಸಿ.ಅಂಜಲಿ ಮುಂತಾದವರಿದ್ದರು.
Published on

ಶಿವಮೊಗ್ಗ: ಅಡಕೆಗೆ ಪ್ರತಿವರ್ಷ ಕಾಣಿಸಿಕೊಳ್ಳುವ ಕೊಳೆ ರೋಗ, ಆತಂಕ ಮೂಡಿಸಿರುವ ಎಲೆಚುಕ್ಕೆ ರೋಗದ ಬಗ್ಗೆ ಕೃಷಿ ಸಖಿಯರು ರೈತರಿಗೆ ಸೂಕ್ತ ಸಮಯದಲ್ಲಿ ಅಗತ್ಯ ಸಲಹೆ ನೀಡಬೇಕೆಂದು ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿ ಡೀನ್ ಡಾ. ಗಣೇಶ್ ನಾಯ್ಕ ಹೇಳಿದರು

ಕೃಷಿ ಸಖಿಯರಿಗೆ ಮಂಗಳವಾರ ಏರ್ಪಡಿಸಿದ್ದ ಆರು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಉಪಕಸುಬಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು. ಕೃಷಿ ತಂತ್ರಜ್ಞಾನಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಕೃಷಿ ಸಖಿಯರ ಪಾತ್ರ ಬಹುಮುಖ್ಯ ಎಂದರು.
ವಿವಿಯ ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕಿ ಡಾ. ಎಸ್.ಸಹನಾ, ವಿಜ್ಞಾನಿಗಳಾದ ಡಾ. ಎಂ.ಸಿ.ಅಂಜಲಿ, ಡಾ. ಎನ್.ಸುಧಾರಾಣಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net