ಉತ್ತಮ ಅಂಕಗಳಿಕೆಗೆ ಹೆಚ್ಚಿನ ಮಹತ್ವ ನೀಡಿ

kls1 (8)
Published on

ಕಡೂರು:ಶಿಕ್ಷಣದಲ್ಲಿ ಅಂಕಗಳಿಕೆಯೇ ಪ್ರಮುಖ ಮಾನದಂಡವಲ್ಲದಿದ್ದರೂ ಉತ್ತಮ ಅಂಕಗಳಿಸುವ ಕಡೆ ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಬೇಕು ಎಂದು ಏರೋನಾಟಿಕಲ್ ಇಂಜಿನಿಯರ್ ಕೆ.ಸಿ.ತೇಜಸ್ವಿ ಹೇಳಿದರು.

ಬಿ.ಮಲ್ಲೇನಹಳ್ಳಿ ಗ್ರಾಮದಲ್ಲಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ವೃತ್ತಿಯಲ್ಲಿ ಮೇಲುಕೀಳು ಎಂಬುವುದುದಿಲ್ಲ. ಎಲ್ಲಾ ವೃತ್ತಿಗಳಿಗೂ ತನ್ನದೇ ಅದ ಪ್ರಾತಿನಿಧ್ಯವಿದೆ. ಇಂಜಿನಿಯರ್ ಅಥವಾ ಸಿವಿಲ್ ಸರ್ವಿಸ್ ಹುದ್ದೆಗಳು ಆಗಬೇಕಿಲ್ಲ. ತಮಗೆ ದೊರೆತ ಹುದ್ದೆಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.

ನಾವು ಎಷ್ಟು ಚೆನ್ನಾಗಿ ವಿಷಯ ಓದಿದ್ದೇವೆ ಎಂಬುದು ತಿಳಿಯುವುದು ಅಂಕಗಳಿಂದೆ. ಹಾಗಾಗಿ ಅಂಕಗಳಿಕೆಗೂ ಮಹತ್ವ ನೀಡಬೇಕು. ಓದುವ ಅಭಿರುಚಿ ಹೆಚ್ಚಿಸಿಕೊಳ್ಳಬೇಕು. ಇತರರ ಜತೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳಬಾರದು. ಬಿ.ಮಲ್ಲೇನಹಳ್ಳಿಯಂತಹ ಚಿಕ್ಕ ಗ್ರಾಮದಲ್ಲಿ ಒಂದೇ ಶೈಕ್ಷಣಿಕ ವರ್ಷದಲ್ಲಿ 8ಮಕ್ಕಳು ಶೇಕಡ 90ಕ್ಕಿಂತ ಹೆಚ್ಚು ಅಂಕಗಳಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಗ್ರಾಪಂ ಸದಸ್ಯ ಎಂ.ಎಸ್.ಯೋಗೀಶ್, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಜಯಮ್ಮ, ಶ್ರೀಮಲ್ಲಿಕಾರ್ಜುನ ದೇವಸ್ಥಾನ ಅಭಿವೃದ್ದಿ ಸಮಿತಿ ಅಧ್ಯಕ್ಷ ಎಂ.ವಿ.ಕುಮಾರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net