

ಹನುಮಸಾಗರ: ಬ್ರಹ್ಮ ಶ್ರೀ ನಾರಾಯಣ ಗುರುಗಳು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತಂದಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.
ಇದನ್ನೂ ಓದಿ:ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ
ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದುಳಿದ ಸಮುದಾಯದವರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಉದ್ದೇಶಕ್ಕೆ ಸಾಮಾಜಿಕ ಹಾಗೂ ಸಮಾನತೆ ಕ್ರಾಂತಿ ಮಾಡಿದರು. ಧಾರ್ಮಿಕ ಆಚರಣೆಗಿಂತ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದರು.
ಗ್ರಾಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೀರನಗೌಡ ಪಾಟೀಲ್, ಸಿಬ್ಬಂದಿ ಮಹಾಂತಯ್ಯ ಕೋಮಾರಿ, ಬಸವರಾಜ ಶಿವಸಿಂಪಿ, ಮಾರುತಿ ಸಾಳುಂಕಿ, ಪ್ರಮುಖರಾದ ಬಸವರಾಜ ಈಳಿಗೇರ, ಭೀಮರಾಯ ಈಳಿಗೇರ, ಸಾಗರ ಈಳಿಗೇರ, ಅಶೋಕ ಈಳಿಗೇರ, ವೀರೇಶ ಈಳಿಗೇರ ಇತರರಿದ್ದರು.