ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ

30sri-1
Published on

ಶೃಂಗೇರಿ: ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಭವಿಷ್ಯದ ದೃಷ್ಟಿಯಿಂದ ಹೆಚ್ಚು ಅಂಕಗಳಿಸುವುದು ಮುಖ್ಯ ಎಂದು ಪೋಲಿಸ್ ಠಾಣಾಧಿಕಾರಿ ಜಕ್ಕಣವರ್ ತಿಳಿಸಿದರು.
ವಿಶ್ವಭಾರತೀ ಸೇವಾ ಟ್ರಸ್ಟ್‌ನಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣದ ಜತೆ ವ್ಯಾಯಾಮ, ಆಟೋಟ ಸ್ಪರ್ಧೆ, ಸಾಂಸ್ಕೃತಿಕ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಪ್ರಮುಖ.ಇದರಿಂದ ವಿದ್ಯಾರ್ಥಿಗಳಲ್ಲಿ ದೃಢವಾದ ಮನೋಭಾವ ಬೆಳೆಯಲು ಸಹಕಾರಿಯಾಗುತ್ತದೆ. ಮಕ್ಕಳ ಕುರಿತು ಪಾಲಕರು ಹೆಚ್ಚಿನ ಕಾಳಜಿ ವಹಿಸುವ ಜತೆಗೆ ಅವರಲ್ಲಿ ಸಕರಾತ್ಮಕ ಚಿಂತನೆಗಳನ್ನು ಪರಿಮೂಡಿಸಬೇಕಿದೆ ಎಂದರು.
ವಕೀಲ ವಿ.ಆರ್.ನಟಶೇಖರ್ ಪೋಕ್ಸೋ ಕಾಯ್ದೆ ಕುರಿತು ಮಾತನಾಡಿ, ಹೆಣ್ಣುಮಕ್ಕಳ ರಕ್ಷಣೆಗೆ ಸರ್ಕಾರ ಕಠಿಣ ಕಾನೂನು ತಂದಿದ್ದರೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ನಿರಂತರ ನಡೆಯುತ್ತದೆ. ಹೆಣ್ಣು ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕವಾಗಿ ತೊಂದರೆ ನೀಡುವರ ಬಗ್ಗೆ ಮುಜುಗರಕ್ಕೆ ಒಳಗಾಗದೇ ಪಾಲಕರು ಹಾಗೂ ಶಿಕ್ಷಕರ ಗಮನಕ್ಕೆ ತರಬೇಕು.ಮಹಿಳೆಯರ ರಕ್ಷಣೆಗೆ ಪೋಲಿಸ್ ಇಲಾಖೆ ಹೆಚ್ಚಿನ ಗಮನ ಹರಿಸಲಿದೆ ಎಂದರು.
ಹದಿಹರೆಯದ ಸಮಸ್ಯೆ ಕುರಿತು ಡಾ.ಪ್ರೀತಿ, ಸಂಸ್ಕಾರದ ಬಗ್ಗೆ ರಾಜಭಟ್ ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅನಂದ ಸ್ವಾಮಿ, ವಿಶ್ವಭಾರತೀ ಟ್ರಸ್ಟ್ ಅಧ್ಯಕ್ಷ ಜಿ.ಕೆ.ಶ್ರೀಧರ್, ರೋಟರಿ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್, ಉದ್ಯಮಿ ಕುಮಾರ ಸ್ವಾಮಿ. ಉಪ ಪ್ರಾಚಾರ್ಯು ಶಶಿಧರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net