

ಸೊರಬ: ವಿಜ್ಞಾನ, ತಂತ್ರಜ್ಞಾನ ಬಹಳಷ್ಟು ಪ್ರಗತಿಯಾಗುತ್ತಿದ್ದು, ವಿದ್ಯಾರ್ಥಿಗಳು ವಿಜ್ಞಾನದ ಕುರಿತು ಹೆಚ್ಚಿನ ಒತ್ತು ನೀಡಬೇಕು ಎಂದು ಸೊರಬ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ. ಎಚ್.ಇ.ಜ್ಞಾನೇಶ್ ಕರೆ ನೀಡಿದರು.
ಗುರುವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್‌ನಿಂದ ಶಾಲಾ ಗ್ರಂಥಾಲಯಗಳಿಗೆ ಬಾಹ್ಯಾಕಾಶ ವಿಶ್ವಕೋಶವನ್ನು ಉಚಿತವಾಗಿ ಕೊಡುಗೆ ನೀಡುವ ಕಾರ್ಯಕ್ರಮದಲ್ಲಿ ಖಗೋಳ ವಿಜ್ಞಾನಕ್ಕೆ ಸಂಬAಽಸಿದAತೆ ವಿಶೇಷ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನಾಶೀಲ ಮನೋಭಾವ ಬೆಳೆಸಿಕೊಂಡಾಗ ತಮ್ಮ ಮಾನಸಿಕ ವ್ಯಕ್ತಿತ್ವದ ಪ್ರತಿಭೆ ಪ್ರದರ್ಶಿಸಲು ಸಹಾಯವಾಗುತ್ತದೆ. ಖಗೋಳ ವಿಜ್ಞಾನವು ಎಲ್ಲ ವಿಜ್ಞಾನಗಳಿಗೆ ಮೂಲಾಧಾರವಾಗಿದೆ. ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು, ಚಲನೆ, ಜಡತ್ವ, ಜೀವರಾಶಿಗಳ ಕುರಿತ ಅಧ್ಯಯನ ಮಾಡಿದಾಗ ಮಾತ್ರ ವೈಜ್ಞಾನಿಕ ಚಿಂತನೆಯ ಅರಿವು ಮೂಡಲು ಸಾಧ್ಯವಾಗುತ್ತದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಡಾ. ಎ.ಎಸ್.ನಾಗರಾಜ್ ಮಾತನಾಡಿ, ರೋಟರಿ ಸಂಸ್ಥೆಯು ತನ್ನ ಸಮಾಜಮುಖಿ ಸೇವಾ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಬಾಹ್ಯಾಕಾಶಕ್ಕೆ ಸಂಬAಽಸಿದAತೆ ಸಮಗ್ರ ಮಾಹಿತಿ ನೀಡುವ ಪುಸ್ತಕವನ್ನು ಉಚಿತವಾಗಿ ತಾಲೂಕಿನ ಎಲ್ಲ ಶಾಲೆಗಳಿಗೆ ನೀಡುವ ಯೋಜನೆ ಹಮ್ಮಿಕೊಂಡಿದೆ. ಹಂತ-ಹAತವಾಗಿ ಎಲ್ಲ ಶಾಲೆಗಳಿಗೆ ವಿತರಿಸಲಾಗುವುದು ಎಂದರು.
ರೋಟರಿ ಸದಸ್ಯ ನಿರಂಜನ ಕುಪ್ಪಗಡ್ಡೆ, ಉಪಪ್ರಾಚಾರ್ಯ ಫಕೀರಪ್ಪ, ಉದ್ಯಮಿ ನಾಗರಾಜ್ ಗುತ್ತಿ, ಎಸ್‌ಡಿಎಂಸಿ ಅಧ್ಯಕ್ಷ ಯುವರಾಜ್ ಕೊಡಕಣಿ, ಶಿಕ್ಷಕರಾದ ಹಾಲಪ್ಪ, ಮಂಜುನಾಥ್, ಕಮಲಾಕರ, ಮಾಲತೇಶ್, ಪ್ರವೀಣ್, ಲತಾ, ನಾಗರತ್ನಾ, ನಾಗಜ್ಯೋತಿ, ನಿರ್ಮಲಾ, ವಾಣಿ, ಸುಮಲತಾ ಇತರಿದ್ದರು.