ತೆರಿಗೆ ಸಂಗ್ರಹ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಿ

12-02-Shiva-5
ರಾಯಚೂರಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಕಾರಿ ಚಂದ್ರಶೇಖರ ನಾಯಕ ಅಧ್ಯಕ್ಷತೆಯಲ್ಲಿ ಬಜೆಟ್ ತಯಾರಿ ಪೂರ್ವಭಾವಿ ಸಭೆ ಜರುಗಿತು. ಪೌರಾಯುಕ್ತ ಗುರುಸಿದ್ಧಯ್ಯ ಹಿರೇಮಠ, ನಗರಸಭೆ ಸದಸ್ಯರಾದ ಬಸವರಾಜ ಪಾಟೀಲ ದರೂರ, ಜಿಂದಪ್ಪ, ಎನ್.ಕೆ.ನಾಗರಾಜ, ಮುಖಂಡರಾದ ರವೀಂದ್ರ ಜಲ್ದಾರ್, ರಾಜು ಪಟ್ಟಿ ಇದ್ದರು.
Published on

ರಾಯಚೂರು: ನಗರದ ಅಭಿವೃದ್ಧಿಗೆ ಸರ್ಕಾರದ ಅನುದಾನದ ಜತೆಗೆ ಕಂದಾಯ ಸಂಗ್ರಹಣೆ ಆದಾಯವೂ ಪ್ರಾಮುಖ್ಯತೆ ವಹಿಸುತ್ತಿದ್ದು, ತೆರಿಗೆ ಸಂಗ್ರಹದ ಬಗ್ಗೆ ನಗರಸಭೆ ಅಕಾರಿಗಳು, ಸಿಬ್ಬಂದಿ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಕಾರಿ ಚಂದ್ರಶೇಖರ ನಾಯಕ ತಿಳಿಸಿದರು.
ಸ್ಥಳೀಯ ನಗರಸಭೆ ಸಭಾಂಗಣದಲ್ಲಿ ಸೋಮವಾರ ಜರುಗಿದ ಬಜೆಟ್ ತಯಾರಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಟ್ಟಡ, ನಿವೇಶನ, ವ್ಯಾಪಾರ ಸೇರಿದಂತೆ ಇನ್ನಿತರ ತೆರಿಗೆ ವಸೂಲಿಗೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.
ಮುಂಗಾರು ಆರಂಭಕ್ಕೆ ಮುನ್ನ ಎಲ್ಲ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕು. ಟ್ಯಾಂಕರ್ ಖರೀದಿಗೆ ಬಜೆಟ್‌ನಲ್ಲಿ ಪ್ರಸ್ತಾವನೆ ಇರಿಸಬೇಕು. ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು.
ನಗರದಲ್ಲಿ ಸ್ವಚ್ಛತೆ ಗುತ್ತಿಗೆ ಪಡೆದ ಗುತ್ತಿಗೆದಾರರು ಸ್ವಚ್ಛತೆ ಮಾಡದೆ ಇದ್ದಲ್ಲಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಿ ಪರವಾನಗಿ ರದ್ದುಪಡಿಸಬೇಕು. ಬಜೆಟ್‌ನಲ್ಲಿ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಚಂದ್ರಶೇಖರ ನಾಯಕ ಸೂಚಿಸಿದರು.
15ನೇ ಹಣಕಾಸು ಮುಕ್ತ ಅನುದಾನಕ್ಕಾಗಿ 5.20 ಕೋಟಿ ರೂ., ಹಣಕಾಸು ನಿರ್ಬಂತ ಅನುದಾನಕ್ಕಾಗಿ 7.80 ಕೋಟಿ ರೂ. ಎಸ್‌ಎ್ಸಿ ಮುಕ್ತ ನಿ ಅನುದಾನಕ್ಕಾಗಿ 5 ಕೋಟಿ ರೂ., ಎಂಪಿಸಿ ಅನುದಾನಕ್ಕಾಗಿ 4.15 ಕೋಟಿ ರೂ., ಎಸ್‌ಬಿಎಂ ಅನುದಾನಕ್ಕಾಗಿ 2.73 ಕೋಟಿ ರೂ. ಅಂದಾಜು ಅನುದಾನ ಬರಬಹುದು ಎಂದು ನಗರಸಭೆ ಅಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ಗುರುಸಿದ್ಧಯ್ಯ ಹಿರೇಮಠ, ನಗರಸಭೆ ಸದಸ್ಯರಾದ ಬಸವರಾಜ ಪಾಟೀಲ ದರೂರ, ಜಿಂದಪ್ಪ, ಎನ್.ಕೆ.ನಾಗರಾಜ, ಮುಖಂಡರಾದ ರವೀಂದ್ರ ಜಲ್ದಾರ್, ರಾಜು ಪಟ್ಟಿ ಹಾಗೂ ವಿವಿಧ ಸಂಘ ಸಂಸ್ಥೆ ಪದಾಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net