ರಸ್ತೆ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿ

mlp2-1 ba
pardಮಹಾಲಿಂಗಪುರ ಪುರಸಭೆಯಲ್ಲಿ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪುರಸಭೆ ವ್ಯವಸ್ಥಾಪಕ ಎಸ್.ಎನ್. ಪಾಟೀಲ ಮಾತನಾಡಿದರು. ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಸ್ಥಾಯಿ ಸಮಿತಿ ಚೇರ್ಮನ್ ಅಬ್ದುಲ್ ರಜಾಕ್ ಬಾಗವಾನ ಇದ್ದರು.
Published on

ಮಹಾಲಿಂಗಪುರ: ಸ್ಥಳೀಯ ಪುರಸಭೆ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಪುರಸಭೆ ಬಜೆಟ್ ಮಂಡನೆಯ ಸಾರ್ವಜನಿಕ ಪೂರ್ವಭಾವಿ ಸಭೆ ಬುಧವಾರ ನಡೆಯಿತು.

ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಮುಖಂಡರಾದ ಸಿದ್ದು ಶಿರೋಳ, ಪಟ್ಟಣದ ಒಳಚರಂಡಿ ವ್ಯವಸ್ಥೆ ಹಾಗೂ ನಗರದ ತುಂಬ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕು. ಮತ್ತು ಚಿಕ್ಕ ಮಕ್ಕಳು ಈಜು ಕಲಿಯಲು ಪಟ್ಟಣದಲ್ಲಿ ಒಂದು ಈಜುಕೊಳ ನಿರ್ಮಿಸಬೇಕೆಂಬ ಸಲಹೆ ನೀಡಿದರು.

ಶಿವು ಹುಣಶ್ಯಾಳ, ಬಸಪ್ಪ ಪರೀಟ ಮಾತನಾಡಿ, ನಗರದಲ್ಲಿ ಲೈಬ್ರರಿ ವ್ಯವಸ್ಥೆ ಸರಿಯಾಗಿಲ್ಲ. ಅದನ್ನು ಇನ್ನಷ್ಟು ಉನ್ನತೀಕರಿಸಬೇಕು. ಅಲ್ಲಲ್ಲಿ ರಸ್ತೆಗಳು ಹದಗೆಟ್ಟಿದ್ದು, ಅವುಗಳನ್ನು ಸುಧಾರಿಸಲು ಹೆಚ್ಚಿನ ಒತ್ತು ನೀಡಬೇಕು ಎಂದರು.

ಅಂಗವಿಕಲರ ಸಂಘದ ಸದಸ್ಯ ರಾಜು ತೇರದಾಳ, ಬಸವರಾಜ ಮಾವಿನಹಿಂಡಿ ಮಾತನಾಡಿ, ಅಂಗವಿಕಲರಿಗಾಗಿ ಒಂದು ಉದ್ಯಾನ ನಿರ್ವಹಣೆಗೆ ನೀಡಬೇಕೆಂದು ಒತ್ತಾಯಿಸಿದರು.

ಅಲ್ಲದೆ, ವಿವಿಧ ಕಡೆಗಳಲ್ಲಿರುವ ಮೌಂಸದಂಗಡಿಗಳನ್ನು ತೆರವುಗೊಳಿಸಿ ಒಂದೇ ಜಾಗದಲ್ಲಿ ವ್ಯವಹರಿಸುವಂತೆ ಮಾಡಿ ನಗರದ ಅಂದ ಹೆಚ್ಚುತ್ತದೆ. ಪಟ್ಟಣದ ದೊಡ್ಡದಾದ ಕೆರೆ ಅಭಿವೃದ್ಧಿಪಡಿಸಿ ಸಾರ್ವಜನಿಕರು ಅಲ್ಲಿ ವಾಯುವಿಹಾರ ಮಾಡಲು ಅನುಕೂಲ ಮಾಡಿಕೊಡಬೇಕು. ಪ್ರತಿಯೊಂದು ವೃತ್ತದಲ್ಲಿಯೂ ಒಂದು ಶೌಚಗೃಹ ಕಟ್ಟಿಸಬೇಕು. ಓಣಿಗಳಲ್ಲಿ ಕೆಲವರು ತಮ್ಮ ಮನೆಮುಂದೆ ಕಟ್ಟಿಕೊಂಡಿರುವ ಕಟ್ಟೆಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನಕೂಲ ಕಲ್ಪಿಸಬೇಕು ಎಂದರು.

ಮೀರಾ ತಟಗಾರ ಮತನಾಡಿ, ನಗರದ ವಿವಿಧ ವೃತ್ತಗಳ ಪುರಸಭೆ ಜಾಗೆಯಲ್ಲಿ ವಾಣಿಜ್ಯ ಮಳಿಗೆಗಳನ್ನು ಮಳಿಗೆಗಳನ್ನು ಕಟ್ಟಿಸಬೇಕು. ಅಲ್ಲದೆ ಸಾಧುನ ಗುಡಿ ಹತ್ತಿರ ಒಂದು ಶುದ್ಧ ಕುಡಿಯುವ ನೀರಿನ ಘಟಕ ತೆರೆದು ಅಲ್ಲಿನ ಜನರ ಕುಡಿಯುವ ನೀರಿನ ಸಮಸ್ಯೆ ದೂರಗೊಳಿಸಬೇಕೆಂದು ತಿಳಿಸಿದರು.

ಮುಖ್ಯಾಕಾರಿ ಈರಣ್ಣ ದಡ್ಡಿ, ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ಅಬ್ದುಲರಜಾಕ್ ಬಾಗವಾನ, ಸದಸ್ಯರಾದ ಶೇಖರ ಅಂಗಡಿ, ಚನಬಸು ಯರಗಟ್ಟಿ, ರಾಜು ಗೌಡಪ್ಪಗೋಳ, ಮುಖಂಡರಾದ ಸುನೀಲಗೌಡ ಪಾಟೀಲ, ರಾಜೇಶ ಬಾವಿಕಟ್ಟಿ, ಚೇತನ ಕಲಾಲ, ಬಸು ಹೋಳಗಿ, ಪರಶುರಾಮ ಮೇತ್ರಿ, ಪುರಸಭೆ ಅಭಿಯಂತರ ಎಸ್.ಎಂ. ಕಲಬುರ್ಗಿ, ವ್ಯವಸ್ಥಾಪಕ ಎಸ್.ಎನ್. ಪಾಟೀಲ, ಸಿಬ್ಬಂದಿ ಎಂ.ಎಂ. ಮುಗಳಖೋಡ, ಸಿ.ಎಸ್. ಮಠಪತಿ, ರವಿ ಹಲಸಪ್ಪಗೋಳ, ಸಿದ್ದು ಅಳ್ಳಿಮಟ್ಟಿ, ಎಂ.ಎಸ್. ಮುಲ್ಲಾ, ರಾಜೇಶ್ವರಿ ಸೋರಗಾಂವಿ, ರಾಮು ಮಾಂಗ, ಲಕ್ಷ್ಮೀ ಪರೀಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net