ಶಿಕಾರಿಪುರಕ್ಕೆ ಹೆಚ್ಚಿನ ವಿದ್ಯುತ್ ಕೊಡಿ: ಶಾಸಕ ಬಿ.ವೈ.ವಿಜಯೇಂದ್ರ ಒತ್ತಾಯ

31 ಎಸ್ಕೆಪಿ_4 b
ವಿದ್ಯುತ್ ಸಮಸ್ಯೆ ಬಗ್ಗೆ ಮೆಸ್ಕಾಂ ಅಽಕಾರಿಗಳೊಂದಿಗೆ ಶಾಸಕ ಬಿ.ವೈ.ವಿಜಯೇಂದ್ರ ಚರ್ಚಿಸಿದರು. ಉಡುಗಣಿ, ಹೊಸೂರು, ತಾಳಗುಂದ ಹೋಬಳಿಗಳ ರೈತರು ಇದ್ದರು.
Published on

ಶಿಕಾರಿಪುರ: ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಗುರುವಾರ ಸಂಜೆ ಹೊಸೂರು, ಉಡುಗಣಿ, ತಾಳಗುಂದ ಕಸಬಾ ಹೋಬಳಿಗಳ ರೈತರು ಶಾಸಕ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಶಿಕಾರಿಪುರದ ಶಾಸಕರ ಕಚೇರಿಯಲ್ಲಿ ರೈತರ ಮನವಿ ಸ್ವೀಕರಿಸಿದ ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯ ಹಾಗೂ ತಾಲೂಕಿನಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆ ಪರಿಹರಿಸುವ ಅಗತ್ಯವಿದೆ. ಅಲ್ಲದೆ ಈಗಾಗಲೇ ಈ ಕುರಿತು ರೈತರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಸಮರ್ಪಕ ವಿದ್ಯುತ್ ಪೂರೈಕೆ ವಿಚಾರವಾಗಿ ಸಂಬAಽಸಿದ ಅಽಕಾರಿಗಳ ಜತೆ ಮಾತನಾಡುವುದಾಗಿ ಭರವಸೆ ನೀಡಿದರು.
ಈ ಬಾರಿ ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಅಲ್ಲದೆ ವಿದ್ಯುತ್ ಸಮಸ್ಯೆಯಿಂದ ರೈತರು ತಾವು ಬೆಳೆದ ಬೆಳೆಗಳಿಗೆ ಬೋರ್‌ವೆಲ್‌ಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೆಳೆಗಳನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ರೈತರು ಶಾಸಕರ ಎದುರು ತಮ್ಮ ಅಳಲನ್ನು ತೋಡಿಕೊಂಡರು.
ತಕ್ಷಣ ತಾಲೂಕಿನ ಮೆಸ್ಕಾಂ ಅಽಕಾರಿ ಇಂದೂಧರ್ ಅವರೊಂದಿಗೆ ಚರ್ಚಿಸಿದ ಶಾಸಕರು, ಸಮಸ್ಯೆ ತಿಳಿದುಕೊಂಡು ತಕ್ಷಣ ಬೆಂಗಳೂರಿನ ಕೆಪಿಟಿಸಿಎಲ್ ಎಂಡಿ ಪಂಕಜ್‌ಕುಮಾರ್ ಪಾಂಡೆ ಅವರಿಗೆ ಕರೆ ಮಾಡಿದರು. ಅಲ್ಲದೆ ತಾಲೂಕಿನ ಬಳ್ಳಿಗಾವಿ ವಿದ್ಯುತ್ ವಿತರಣಾ ಕೇಂದ್ರದಿAದ ರೈತರಿಗೆ ಪ್ರತಿ ದಿನ 3.7 ಮಿಲಿಯನ್ ಯುನಿಟ್ ವಿದ್ಯುತ್ ಪೂರೈಕೆ ಆಗುತ್ತಿದ್ದು ಈಗ ಅರ್ಧದಷ್ಟು ಅಂದರೆ 1.3 ಮಿಲಿಯನ್ ಯೂನಿಟ್ ವಿದ್ಯುತ್ ಪೂರೈಕೆ ಆಗುತ್ತಿದೆ. ಇದರಿಂದ ತಾಲೂಕಿನ 40 ಸಾವಿರಕ್ಕೂ ಹೆಚ್ಚು ರೈತರ ಬೆಳೆಗಳಿಗೆ ನೀರಿಲ್ಲದೆ ಸಮಸ್ಯೆ ಎದುರಾಗಿದೆ. ಬಳ್ಳಿಗಾವಿ ಕೇಂದ್ರದಿAದ 3.7 ಮಿಲಿಯನ್ ಯೂನಿಟ್ ವಿದ್ಯುತ್ ಪೂರೈಕೆ ಮುಂದುವರೆಸಿ ರೈತರ ಬೋರ್‌ವೆಲ್‌ಗಳಿಗೆ 6-7 ಗಂಟೆ ನಿರಂತರ ವಿದ್ಯುತ್ ನೀಡಲು ಒತ್ತಾಯಿಸಿದರು.
ಉಡುಗಣಿ-ತಾಳಗುಂದ-ಹೊಸೂರು ಹೋಬಳಿಗಳ ಏತ ನೀರಾವರಿ ಯೋಜನೆಗೆ ರಾಣೆಬೆನ್ನೂರು ಭಾಗದ ಸ್ಟೇಷನ್‌ನಿಂದ ಹೆಚ್ಚಿನ ವಿದ್ಯುತ್ ಸಂಪರ್ಕ ನೀಡಲು ಸಹ ಶಾಸಕರು ಒತ್ತಾಯಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರಪಾಟೀಲï ಸೇರಿದಂತೆ ಪಕ್ಷದ ಮುಖಂಡರು ಮತ್ತು ಉಡುಗಣಿ, ಹೊಸೂರು, ತಾಳಗುಂದ ಹೋಬಳಿಗಳ ರೈತರು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net