

ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ಲಾಸಿಕ್ ಶಾಲೆ ನಗರದಲ್ಲಿ ಒಳ್ಳೆಯ ಶಾಲೆಯಾಗಿದೆ. ಇಲ್ಲಿನ ಶಿಕ್ಷಕರು ಗುಣಮಟ್ಟದ ಶಿಕ್ಷಣದ ಜತೆಗೆ ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ನೀಡಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಕ್ಲಾಸಿಕ್ ಇಂಟರ್ನ್ಯಾಶನಲ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಶಾಲೆಯ 15ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಧರ ನಾಡಗೀರ ಮಾತನಾಡಿ, ಮಕ್ಕಳಿಗೆ ಮೌಲ್ಯಯುತ ಶಿಕ್ಷಣದೊಂದಿಗೆ ಪರಿಸರ ರಕ್ಷಣೆಗೆ ಬಗ್ಗೆ ಜಾಗೃತಿ ಮೂಡಿಸಬೇಕು. ಮಕ್ಕಳು ತಮ್ಮ ಆಸಕ್ತಿ ವಿಷಯಗಳನ್ನು ಶಿಕ್ಷಣಕ್ಕೆ ಆಯ್ಕೆ ಮಾಡಿಕೊಳ್ಳಲು ಪಾಲಕರು ಸಹಕರಿಸಬೇಕು. ಇಂದಿನ ತಂತ್ರಜ್ಞಾನವನ್ನು ಮಕ್ಕಳು ಮಿತ ಹಾಗೂ ಹಿತವಾಗಿ ಬಳಸಿಕೊಳ್ಳಬೇಕು. ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಉತ್ತಮ ಫಲಿತಾಂಶದೊಂದಿಗೆ ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಹಾಗೂ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಪಾಲಕರು ಮಕ್ಕಳಿಗೆ ಲಾಲನೆ ಪಾಲನೆ ಮಾಡುವುದರ ಜೊತೆಗೆ ಒಳ್ಳೆ ಸಂಸ್ಕಾರ ನೀಡಬೇಕು. ಮಾನವೀಯ ಮೌಲ್ಯ, ಉತ್ತಮ ವಿಚಾರ, ಉತ್ತಮ ನಡತೆ ಪ್ರಾಮಾಣಿಕತೆ ಹೊಂದಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಂಸ್ಥೆ ಅಧ್ಯಕ್ಷ ಲಕ್ಷ್ಮಣ್ ಉಪ್ಪಾರ ಮಾತನಾಡಿದರು. ಬಿಇಒ ಅಶೋಕ ಸಿಂದಗಿ, ಎಸಿಪಿ ಪ್ರಶಾಂತ ಸಿದ್ದಗೌಡರ, ಎಸ್.ಸಿ. ಮೇಟಿ, ರೇಣುಕಾ ಉಪ್ಪಾರ, ಗೋವಿಂದಪ್ಪ ಗೌಡ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಡಾ. ಆನಂದ ಪಾಂಡುರಂಗಿ, ದಯಾನಂದ್ ಸೇಗುಣಿಸಿ, ಡಾ. ಎಂ.ವೈ. ಸಾವಂತ, ಇತರರು ಇದ್ದರು.
2024-25ನೇ ಸಾಲಿನ ಅತ್ಯುತ್ತಮ ಹುಡುಗ ಹಾಗೂ ಹುಡುಗಿ ಪ್ರಶಸ್ತಿ ನೀಡಲಾಯಿತು. ಶಾಲೆ ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು. ರ್ಪೂಣಿಮಾ, ರೂಪಾ ನಿರೂಪಿಸಿದರು.