ಅರ್ಹ ಫಲಾನುಭವಿಗಳಿಗೆ ಹಣ ನೀಡಿ

OCT 25-HRP-03
ಹರಪನಹಳ್ಳಿ ಪುಣಭಗಟ್ಟ ಪಂಚಾಯಿತಿ ಪಿಡಿಒ ಮಂಜ್ಯಾನಾಯ್ಕ ರೈತರು ಮನವಿ ಸಲ್ಲಿಸಿದರು. ಪ್ರಮುಖರಾದ ಪಾಟೀಲ್ ಬಸವರಾಜಪ್ಪ, ಕಲ್ಲಹಳ್ಳಿ ಹನುಮಂತ, ಶಿವಾನಂದಯ್ಯ, ನಾಗರಾಜಪ್ಪ, ಮಹದೇವಪ್ಪ, ಬಸಣ್ಣ, ಮಂಜಪ್ಪ, ಬಸವರಾಜಪ್ಪ, ಎರ‌್ರಿಸ್ವಾಮಿ, ನಂದಿಕಂಬ ಪರಮೇಶ್ವರಪ್ಪ, ಸಿದ್ದಪ್ಪ, ವಕಮ್ಮತ್ತಹಳ್ಳಿ ಮುರುಗೇಶಿ, ಚನ್ನಪುರ ನಾಗರಾಜ, ಹನುಮಂತನಾಯ್ಕ ಇತರರಿದ್ದರು.
Published on

ಹರಪನಹಳ್ಳಿ: ಮಳೆಗೆ ಬೆಳೆ ಹಾನಿಯಾದ ಜಮೀನುಗಳನ್ನ ಸರಿಯಾದ ಸಮೀಕ್ಷೆ ನಡೆಸಿ, ಅರ್ಹ ಫಲಾನುಭವಿಗಳಿಗೆ, ಬೆಳೆ ಕಟಾವು ಹಣ ತಲುಪುವಂತೆ ಮಾಡಿ ಎಂದು ಒತ್ತಾಯಿಸಿ ತಾಲೂಕಿನ ಪುಣಭಗಟ್ಟ ಪಂಚಾಯಿತಿಗೆ ರೈತರು ಶುಕ್ರವಾರ ಮುತ್ತಿಗೆ ಹಾಕಿ, ಪಿಡಿಒ ಮಂಜ್ಯಾನಾಯ್ಕ ರವರಿಗೆ ಮನವಿ ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮಂಜುನಾಥ ಮಾತನಾಡಿ, ಅರಸೀಕೆರೆ ಹೋಬಳಿಯ 14ಹಳ್ಳಿಯ ರೈತರ ಜಮೀನು, ಪ್ರಸಕ್ತ ವರ್ಷದಲ್ಲಿ ಅತಿಯಾದ ಮಳೆಯಿಂದ ಸಣ್ಣಪುಟ್ಟ ರೈತರ ಬೆಳೆಗಳು ಹಾನಿಗೊಳಗಾಗಿವೆ. ಆದರೆ, ಅಧಿಕಾರಿಗಳು ಬೆಳೆ ವಿಮೆ ಒದಗಿಸುವ ಕಂಪನಿಯೊಂದಿಗೆ ಕೈ ಜೋಡಿಸಿ. ಇಚ್ಚೆ ಬಂದವರಿಗೆ ಸುಳ್ಳು ವರದಿ ಸಿದ್ಧಪಡಿಸಿಕೊಂಡು ನಿಜವಾದ ಫಲಾನುಭವಿಗಳಿಗೆ ಅನ್ಯಾಯ ವೆಸಗುತ್ತಿರುವುದು ಗಮನಕ್ಕೆ ಬಂದಿದ್ದು, ಮತ್ತೊಮ್ಮೆ ಮರು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಣ ಮಂಜೂರು ಮಾಡಿಸಿ ಎಂದರು.

ರೈತ ಮುಖಂಡ ಕೆಂಚಪ್ಪ ಮಾತನಾಡಿ, ಬೆಳೆ ಕಟಾವಿಗೆ ಬಂದಾಗ ರೈತರಿಗೆ ಯಾವುದೆ ಮಾಹಿತಿ ನೀಡದೆ, ತಮಗೆ ಅನುಕೂಲವಿರುವ ಜಮೀನುಗಳಲ್ಲಿ ಹೋಗಿ ಸಮೀಕ್ಷೆ ನಡೆಸಿ ಹಣವನ್ನು ಮಂಜೂರು ಮಾಡಿಸಲಾಗುತ್ತಿದೆ. ಮರು ಪರಿಶೀಲಿಸಿ ನಿಜವಾದ ಅರ್ಹರಿಗೆ ಹಣವನ್ನು ಹಾಕಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದರು.

ಅರಸೀಕೆರೆ ಪೋಲೀಸ್ ಠಾಣೆ ಪಿಎಸ್‌ಐ ಕೆ.ರಂಗಯ್ಯ ಮದ್ಯಸ್ಥಿಕೆವಹಿಸಿ ಆಗಿರುವ ಲೋಪವನ್ನು ಸರಿಪಡಿಸಿ ಸೂಕ್ತ ಫಲಾನುಭವಿಗಳಿಗೆ ನ್ಯಾಯ ಒದಗಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಪ್ರತಿಭಟನೆಯನ್ನು ತಿಳಿಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net