ಖಾಸಗಿ ಬೆಳೆ ಸಮೀಕ್ಷೆದಾರರಿಗೆ ಮೊಬೈಲ್ ನೀಡಿ

ಅಳವಂಡಿ ವಲಯದ ಖಾಸಗಿ ಬೆಳೆ ಸಮೀಕ್ಷೆದಾರರು ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕೃಷಿ ಅಧಿಕಾರಿಗಳಾದ ಪ್ರತಾಪಗೌಡ ನಂದನಗೌಡ್ರ, ಬಿ.ಎಂ.ಗೊಬ್ಬರಗುಂಪಿ, ಆರ್‌ಐ ಸುರೇಶ ಹಂದ್ರಾಳ, ಸಮೀಕ್ಷೆದಾರರಾದ ಮುದಿಯಪ್ಪ, ಗವಿಸಿದ್ದಪ್ಪ, ವೆಂಕಟೇಶ, ಹನುಮರಡ್ಡಿ, ಶರಣಯ್ಯ, ವೀರೇಶ ಇತರರಿದ್ದರು.

Published on

ಅಳವಂಡಿ: ವಲಯದ ಖಾಸಗಿ ಬೆಳೆ ಸಮೀಕ್ಷೆದಾರರು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಖಾಸಗಿ ಬೆಳೆ ಸಮೀಕ್ಷೆದಾರರ ಅಧ್ಯಕ್ಷ ಮುದಿಯಪ್ಪ ಬಾರಕೇರ ಮಾತನಾಡಿ, ಮಳೆ, ಗಾಳಿ ಎನ್ನದೆ ದೂರದ ರೈತ ಜಮೀನುಗಳಿಗೆ ತೆರಳಿ ಬೆಳೆ ಸಮೀಕ್ಷೆ ಮಾಡಬೇಕಾಗಿದ್ದು, ನಮಗೆ ಮಳೆಯ ರಕ್ಷಣೆಗಾಗಿ ಜರ್ಕಿನ್ ನೀಡಬೇಕು. ಬೆಳೆ ವಿವರ ಮೊಬೈಲ್‌ನಲ್ಲಿ ದಾಖಲಿಸಬೇಕಿದ್ದರಿಂದ ಎಲ್ಲರಿಗೂ ಮೊಬೈಲ್ ಹಾಗೂ ಪವರ್ ಬ್ಯಾಂಕ್ ನೀಡಬೇಕೆಂದ ಆಗ್ರಹಿಸಿದರು. ಕೃಷಿ ಅಧಿಕಾರಿಗಳಾದ ಪ್ರತಾಪಗೌಡ ನಂದನಗೌಡ್ರ, ಬಿ.ಎಂ.ಗೊಬ್ಬರಗುಂಪಿ, ಕಂದಾಯ ನಿರೀಕ್ಷಕ ಸುರೇಶ ಹಂದ್ರಾಳ, ಸಮೀಕ್ಷೆದಾರರಾದ ಗವಿಸಿದ್ದಪ್ಪ ಬಾರಕೇರ, ವೆಂಕಟೇಶ, ವೀರೇಶ ಕುರಿ, ಹನುಮರಡ್ಡಿ ಗಿರಡ್ಡಿ, ನಾಗರಾಜ ಕೇಸಲಾಪುರ, ಮಂಜುನಾಥ, ಯೋಗೇಶ್ವರ, ಮಾರುತಿ, ಸುರೇಶ, ಸಂತೋಷ ಹಂಚಿನಾಳ, ಶರಣಯ್ಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net