ಮೊಟ್ಟೆ ಖರೀದಿಗೆ ಹೆಚ್ಚಿನ ಹಣ ನೀಡಲಿ

10 DVD 02
ದೇವದುರ್ಗ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಬಸವರಾಜ ಕಟ್ಟಿಮನಿಗೆ ಅಕ್ಷರ ದಾಸೋಹ ನೌಕರರ ಸಂಘ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷೆ ಮರಿಯಮ್ಮ, ಕಾರ್ಯದರ್ಶಿ ಶ್ರೀಲೇಖಾ, ಶೋಭಾ, ಸಿಐಟಿಯು ತಾಲೂಕು ಸಂಚಾಲಕ ಗಿರಿಯಪ್ಪ ಪೂಜಾರಿ, ಪದ್ಮಾ, ಸರಸ್ವತಿ, ಶಶಿಕಲಾ, ಮಂಜುಳಾ, ಖಾಜಾಬೀ ಇತರರಿದ್ದರು.
Published on

ದೇವದುರ್ಗ: ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಿಸಿಯೂಟ ಯೋಜನೆಯಡಿ ಮೊಟ್ಟೆ ಖರೀದಿಗೆ ನೀಡುವ ಅನುದಾನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಪಟ್ಟಣದ ತಾಪಂ ಕಚೇರಿ ಮುಂದೆ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಬಸವರಾಜ ಕಟ್ಟಿಮನಿಗೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು ಸಂಯೋಜಿತ) ಮಂಗಳವಾರ ಮನವಿ ಸಲ್ಲಿಸಿತು.

ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಮೊಟ್ಟೆ ಖರೀದಿಗೆ ಸರ್ಕಾರ ಬಿಸಿಯೂಟ ನೌಕರರ ಖಾತೆಗೆ ಹಣ ನೀಡುತ್ತಿದೆ. ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಹೆಚ್ಚಳವಾಗಿದ್ದು ಸರ್ಕಾರ ಒಂದು ಮೊಟ್ಟೆ ಖರೀದಿಗೆ 5ರೂ. ನೀಡುತ್ತಿದೆ.

ಆದರೆ, ಈ ಬೆಲೆಗೆ ಯಾವುದೇ ಮೊಟ್ಟೆ ಸಿಗುವುದಿಲ್ಲ. ಇದರಿಂದ ನೌಕರರು ಒಂದೆರಡು ರೂ. ತಮ್ಮ ಸ್ವಂತ ಹಣ ನೀಡುವಂಥ ಪರಿಸ್ಥಿತಿಯಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಸರ್ಕಾರ ಪ್ರತಿಮೊಟ್ಟೆ ಖರೀದಿಗೆ 7ರೂ. ನೀಡಬೇಕು. ಮೊಟ್ಟೆ ಹಣ ಮೂರು ತಿಂಗಳಿಗೊಮ್ಮೆ ನೀಡುತ್ತಿದ್ದು ಅದನ್ನು ಪ್ರತಿ ತಿಂಗಳು ನೀಡಬೇಕು. ಬಿಸಿಯೂಟ ನೌಕರರಿಗೆ ಆಗುತ್ತಿರುವ ಸಮಸ್ಯೆ ನಿವಾರಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net