ಪತ್ರಕರ್ತರಿಗೆ ಲ್ಯಾಪ್‌ಟಾಪ್ ನೀಡಿ

25 kgl photo 2
Published on

ಕೊಳ್ಳೇಗಾಲ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರಿಗೆ ಲ್ಯಾಪ್‌ಟಾಪ್ ನೀಡಬೇಕೆಂದು ಕೋರಿ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರಿಗೆ ಸೋಮವಾರ ಸಂಘದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.


ಈ ವೇಳೆ ಸಂಘದ ಅಧ್ಯಕ್ಷ ಡಿ.ಸಿದ್ದರಾಜು ಮಾತನಾಡಿ, ಪತ್ರಕರ್ತರು ಪ್ರತಿನಿತ್ಯ ಸಂಗ್ರಹಿಸುವ ಸುದ್ದಿಗಳನ್ನು ಪತ್ರಿಕಾ ಸಂಸ್ಥೆಗಳಿಗೆ ತಲುಪಿಸಲು ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್ ಸೌಲಭ್ಯಗಳಿಲ್ಲದೆ ಸಾಕಷ್ಟು ಪರಿಶ್ರಮ ವಹಿಸುತ್ತಿದ್ದಾರೆ. ಆದ್ದರಿಂದ ನಗರಸಭೆಯ 2022-23 ನೇ (ಪ್ರಸಕ್ತ) ಸಾಲಿನ ಬಜೆಟ್ ನಲ್ಲಿ ಪತ್ರಕರ್ತರಿಗೆ ಮೀಸಲಿಟ್ಟಿರುವ 10. ಲಕ್ಷ ರೂ ಅನುದಾನದಲ್ಲಿ ಸಂಘದ ಎಲ್ಲ ಸದಸ್ಯರಿಗೂ ಉಪಯೋಗವಾಗುವಂತೆ ಲ್ಯಾಪ್‌ಟಾಪ್ ಕೊಡಿಸಿ ಕೊಡುವಂತೆ ಮನವಿ ಸಲ್ಲಿಸಿದರು.


ಈ ವೇಳೆ ಮಾತನಾಡಿದ ನಗರಸಭಾಧ್ಯಕ್ಷ ಸುಶೀಲಾ ಅಧಿಕಾರಿಗಳೊಡನೆ ಈ ಕುರಿತು ಚರ್ಚಿಸಿ ಕ್ರಮವಹಿಸುವ ಭರವಸೆ ನೀಡಿದರು. ಪೌರಾಯುಕ್ತ ನಂಜುಂಡಸ್ವಾಮಿ ಮಾತನಾಡಿ ನಗರಸಭೆಯಲ್ಲಿ ಪತ್ರಕರ್ತರಿಗೆ ಲ್ಯಾಪ್ ಟಾಪ್ ಕೊಡುವ ಅವಕಾಶವಿದ್ದರೆ ನಿಯಮದಂತೆ ಸಭೆಯಲ್ಲಿ ಮಂಡಿಸಿ ಸರ್ವ ಸದಸ್ಯರ ಒಪ್ಪಿಗೆ ಪಡೆದು ಕೊಡಿಸಿ ಕೊಡುವುದಾಗಿ ಭರವಸೆ ನೀಡಿದರು. ಸಂಘದ ಉಪಾಧ್ಯಕ್ಷ ಎಂ.ಮರಿಸ್ವಾಮಿ, ಕಾರ್ಯದರ್ಶಿ ಎಂ.ಪಿ.ಮಹೇಶ್, ನಿರ್ದೇಶಕರಾದ ಎಸ್. ರಾಜಶೇಖರ್, ಅವಿನ್, ಬಿ.ಪ್ರೇಮ್‌ಸಾಗರ್, ಸದಸ್ಯರಾದ ಬಸಂತ್, ಮಲ್ಲಪ್ಪ, ಗಿರೀಶ್, ಯುನುಸ್ ಹಾಗೂ ಚಿಕ್ಕಮಾಳಿಗೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net