ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡಿ

Give land for construction of community building
ಮಹಾಲಿಂಗಪುರದ ಶ್ರೀಗುರು ಕೇತೇಶ್ವರ ಮೇದಾರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸಮುದಾಯ ಭವನ ನಿರ್ಮಾಣಕ್ಕೆ ಪುರಸಭೆ ನಿವೇಶನ ನೀಡಲು ಆಗ್ರಹಿಸಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಬಸವರಾಜ ಮೇದಾರ, ಮಹಾದೇವಪ್ಪ ಮೇದಾರ ಇದ್ದರು.
Published on

ಮಹಾಲಿಂಗಪುರ: ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡಬೇಕೆಂದು ಆಗ್ರಹಿಸಿ ಸ್ಥಳೀಯ ಶ್ರೀ ಗುರು ಕೇತೇಶ್ವರ ಮೇದಾರ ಕ್ಷೇಮಾಭಿವೃದ್ಧಿ ಸಂಘದಿಂದ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.

ಮೇದಾರ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದ ಪರಿಶಿಷ್ಟ ಪಂಗಡವಾಗಿದೆ. ಮದುವೆ- ಮುಂಜಿವೆ, ಸಮಾಜದ ಇನ್ನಿತರ ಧಾರ್ಮಿಕ ಕಾರ್ಯ ಮಾಡಬೇಕೆಂದರೆ ದುಬಾರಿ ಖಾಸಗಿ ಮಂಟಪಗಳ ಮೊರೆ ಹೋಗಬೇಕು. ಅಂತಹದರೊಳಗೆ ಆರ್ಥಿಕವಾಗಿ ಹಿಂದುಳಿದ ವರ್ಗ ಬೇರೆ, ಖಾಸಗಿ ಖುಲ್ಲಾ ಜಾಗೆಗಳಲ್ಲೇ ಪೆಂಡಾಲ್ ಹಾಕಿ ಕಾರ್ಯಕ್ರಮಗಳನ್ನು ನಡೆಸಬೇಕಾಗಿದೆ. ದುಬಾರಿ ಹಣ ನೀಡಬೇಕಾಗುತ್ತದೆ. ಹಣ ಹೊಂದಿಸುವುದು ಸಮುದಾಯದ ಬಡ ಕುಟುಂಬಗಳಿಗೆ ಆಗದ ಮಾತಾಗಿದೆ. ಆದ್ದರಿಂದ ಅನೇಕ ಸಮಾಜಗಳಿಗೆ ಪುರಸಭೆಯಿಂದ ಜಾಗಗಳನ್ನು ಒದಗಿಸಿರುವಂತೆಯೇ ನಮ್ಮ ಸಮಾಜಕ್ಕೂ ಸಹಕಾರ ರೂಪದಲ್ಲಿ ಜಾಗ ನೀಡಬೇಕೆಂದು ಮನವಿ ಮಾಡಿದರು.

ಪುರಸಭೆ ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಸ್ಥಾಯಿ ಸಮಿತಿ ಚೇರ್ಮನ್ ಅಬ್ದುಲ್ ರಜಾಕ ಭಾಗವಾನ, ಸದಸ್ಯರಾದ ಶೇಖರ ಅಂಗಡಿ, ಮುಸ್ತಾಕ್ ಚಿಕ್ಕೋಡಿ, ಬಲವಂತಗೌಡ ಪಾಟೀಲ, ಬಸವರಾಜ ಮೇದಾರ, ರಾಜು ಗೌಡಪ್ಪಗೋಳ ಮತ್ತು ಸದಸ್ಯೆಯರಾದ ಭಾವನಾ ಪಾಟೀಲ, ಸುಜಾತಾ ಮಾಂಗ, ಸವಿತಾ ಹುರಕಡ್ಲಿ, ಚಾಂದನಿ ನಾಯಿಕ, ಮುಖಂಡರಾದ ಸುನೀಲಗೌಡ ಪಾಟೀಲ, ಮಹಾಲಿಂಗಪ್ಪ ಮಾಳಿ, ಮಹಾದೇವಪ್ಪ ಮೇದಾರ, ಲಕ್ಷ್ಮಣ ಮಾಂಗ ಮತ್ತು ಮೇದಾರ(ಬುರುಡ) ಸಮುದಾಯದ ಅಂಬವ್ವ, ನಂದವ್ವ, ಸವಿತಾ, ಲಕ್ಷ್ಮೀ, ಅನಿತಾ, ಮಹಾದೇವ, ಶಿವಾನಂದ, ಮಹಾಲಿಂಗಪ್ಪ, ರಾಯಪ್ಪ, ಬಸು, ಅನೀಲ, ಸಂತೋಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net